ಯೋಗ ಸಾಧಕಿ ಸಿಂಚನಾಗೆ ಪ್ರಶಸ್ತಿ

sinchana
Published on

ಮಡಿಕೇರಿ: ಕೊಡಗು ಜಿಲ್ಲೆಯ ಮದೆನಾಡಿನ ಯುವ ಯೋಗ ಪ್ರತಿಭೆ ಸಿಂಚನಾ ಯೋಗದಲ್ಲಿ ಇಂಟರ್ ನ್ಯಾಷನಲ್ ಬುಕ್ ಆಫ್ ವಲ್ಡ್ ರೆಕಾರ್ಡ್ ಮಾಡಿದ್ದು, ಅಮತ್ ಸರದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಸ್ವೀಕರಿಸಿದರು.

ಅಮತಸರದ ಗುರುನಾನಕ್ ದೇವ್ ವಿಶ್ವವಿದ್ಯಾನಿಲಯಲ್ಲಿ ಆಯೋಜಿತ ಸಮಾರಂಭದಲ್ಲಿ ಹಿಂದಿ ಸಿನಿಮಾ ನಟಿ ಅನಿತಾ ರಾಜ್ ಹಾಜರಿದ್ದ ಕಾರ್ಯಕ್ರಮದಲ್ಲಿ ಇಂಟರ್ ನ್ಯಾಷನಲ್ ಬುಕ್ ಆಫ್ ವಲ್ಡ್ ರೆಕಾರ್ಡ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟ್ ರಾಜ ಪ್ರಶಸ್ತಿ ಪ್ರಧಾನ ಮಾಡಿದರು.

ಇದೇ ಸಂದರ್ಭ ಯೋಗ ಪ್ರದರ್ಶನ ಮೂಲಕ ಸಿಂಚನಾ ಸರ್ವರ ಪ್ರಶಂಸೆಗೆ ಪಾತ್ರರಾದರು. ಸಿಂಚನಾಳ ಪೋಷಕರಾದ ಕೀರ್ತಿ ಮತ್ತು ರೇಣುಕಾ, ಸೈನಿಕ, ಮಾಜಿ ಅಥ್ಲೆಟಿಕ್ ಆಟಗಾರ ಬಿ.ಸಿ.ತಿಲಕ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net