ಭೀರ್ಯ ಕೊಡವ ಸಿನಿಮಾಕ್ಕೆ ಪ್ರಶಸ್ತಿ

Award for the movie Bhirya Kodava
Published on

ಮಡಿಕೇರಿ
೨೦೨೨ರಲ್ಲಿ ತೆರೆ ಕಂಡ ತೀತೀರ ಶರ್ಮಿಲಿ ಅಪ್ಪಚ್ಚು ನಿರ್ಮಾಣದ ಭೀರ್ಯ ಕೊಡವ ಸಿನಿಮಾಕ್ಕೆ ಪ್ರತಿಷ್ಠಿತ "ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್" ಪ್ರಶಸ್ತಿ ದೊರೆತಿದೆ. ಬುಧವಾರ ಬೆಂಗಳೂರಿನ ರಾಜಾಜಿನಗರದ ಒರಿಯನ್ ಮಹಲ್‌ನ ಪಿ.ವಿ.ಆರ್ ಚಿತ್ರಮಂದಿರದಲ್ಲಿ ನಡೆದ "ಭೀರ್ಯ" ಕೊಡವ ಸಿನಿಮಾದ ನಿರ್ಮಾಪಕಿ ತೀತೀರ ಶರ್ಮಿಲಿ ಅಪ್ಪಚ್ಚು ಅವರು ಕಾಂತಾರ ಸಿನಿಮಾ ಖ್ಯಾತಿಯ ನಿರ್ದೇಶಕ ರಿಷಭ್ ಶೆಟ್ಟಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಆರ್ಯನ್ ನಿರ್ದೇಶನದ "ಭೀರ್ಯ" ಕೊಡವ ಸಿನಿಮಾ ೨೦೨೨ರಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಂಡಿತ್ತು. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಯ್ಯರಣಿಯಂಡ ಶಿಲಾನ್ ಚೋಂದಮ್ಮ, ಕಾಳಿಮಾಡ ವಂಶಿಕಾ, ಉಡುಪಿಯ ರಾಜ್ ಚರಣ್, ಚಮ್ಮಟೀರ ಪ್ರವೀಣ್ ಉತ್ತಪ್ಪ, ಮಲ್ಲಾಮಾಡ ಶಾಮಲಾ ಸುನಿಲ್, ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಯಾಜ್ ಖಾನ್ ಸಾಹಸ ನಿರ್ದೇಶನ ಮಾಡಿದ್ದಾರೆ. ಶ್ರೀ ಅವರ ಸಂಗೀತಕ್ಕೆ ಸಾಹಿತಿಗಳಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಗುಡಿಯಂಗಡ ತಿಮ್ಮಯ್ಯ ಸಾಹಿತ್ಯ ಬರೆದು ಖ್ಯಾತ ಹಿನ್ನೆಲೆ ಗಾಯಕರಾದ ಮಚ್ಚಂಡ ಶರಣ್ ಅಯ್ಯಪ್ಪ ಹಾಗೂ ಚಕ್ಕೇರ ಪಂಚಮ್ ಬೋಪಣ್ಣ ಹಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net