ಆರು ಶಿಕ್ಷಕರಿಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿ

Siddapura Awarded Teachers
Published on

ಸಿದ್ದಾಪುರ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡುವ 2024ನೇ ಸಾಲಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆರು ಶಿಕ್ಷಕರು ಆಯ್ಕೆಯಾಗಿದ್ದಾರೆ.

ಹೆಗ್ಗರಣಿ ಸಹಿಪ್ರಾ ಶಾಲೆಯ ಮುಖ್ಯಾಧ್ಯಾಪಕ ನಾರಾಯಣ ಅಗೇರ, ತ್ಯಾಗಲಿ ಸಹಿಪ್ರಾ ಶಾಲೆಯ ಪದೋನ್ನತ ಮುಖ್ಯಾಧ್ಯಾಪಕ ವೀರೇಶ ನಾಯ್ಕ, ಸಹಿಪ್ರಾ ಶಾಲೆಯ ವಂದಾನೆಯ ಪದೋನ್ನತ ಮುಖ್ಯಾಧ್ಯಾಪಕಿ ಲಕ್ಷ್ಮೀ ನಾಯ್ಕ, ಹೊಸೂರು ಸಹಿಪ್ರಾ ಶಾಲೆಯ ಸಹ ಶಿಕ್ಷಕಿ ಸುರೇಖಾ ಹೆಗಡೆ, ಕಾಳೇನಳ್ಳಿ ಸಕಿಪ್ರಾ ಶಾಲೆಯ ಸಹ ಶಿಕ್ಷಕ ಶ್ರೀಧರ ಎನ್.ಭಟ್, ಹೊಸಳ್ಳಿ ಸಕಿಪ್ರಾ ಶಾಲೆಯ ಸಹ ಶಿಕ್ಷಕ ಪ್ರಕಾಶ ಆಚಾರಿ ಆಯ್ಕೆಗೊಂಡವರಾಗಿದ್ದಾರೆ.

ಸೆ. 5ರಂದು ಸಿದ್ದಾಪುರದ ಶಂಕರಮಠದಲ್ಲಿ ಆಯೋಜನೆಗೊಂಡಿರುವ ಶಿಕ್ಷಕರ ದಿನೋತ್ಸವದಂದು ಶಾಸಕ ಭೀಮಣ್ಣ ನಾಯ್ಕ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net