

ಕಾರವಾರ: ವಿಶ್ವದ 2ನೇ ಅತಿ ಎತ್ತರದ ಶಿವನ ವಿಗ್ರಹ ಎಂಬ ಖ್ಯಾತಿ ಪಡೆದಿರುವ ಮುರ್ಡೇಶ್ವರದ ಶಿವನ ಮೂರ್ತಿಗೆ ಗ್ಲೋಬಲ್ ಪೀಪಲ್ಸ್ ಚಾಯ್ಸ್ ಅವಾರ್ಡ್ ಲಭಿಸಿದೆ.
ಅಂತಾರಾಷ್ಟ್ರೀಯ ಫಿಲಿಪ್ಸ್ ಕಂಪನಿ ಕೈಗೊಂಡಿದ್ದ ಈ ಸ್ಪರ್ಧೆಗೆ ಮುರ್ಡೇಶ್ವರ ಸೇರಿ ವಿಶ್ವದ 25 ಪ್ರಸಿದ್ಧ ತಾಣಗಳು ನಾಮ ನಿರ್ದೇಶನಗೊಂಡಿದ್ದವು. ಸಾರ್ವಜನಿಕರ ಆನ್ಲೈನ್ ವೋಟಿಂಗ್ ಮೂಲಕ ತಾಣವನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಒಟ್ಟಾರೆ 6800 ಜನ ವಿವಿಧ ತಾಣಗಳ ಬಗ್ಗೆ ಮತ ಚಲಾಯಿಸಿದ್ದರು. ಅದರಲ್ಲಿ ಮುರ್ಡೇಶ್ವರದ ಶಿವನಮೂರ್ತಿ ಶೇ.40 ಎಂದರೆ 2500 ಕ್ಕೂ ಹೆಚ್ಚು ವೋಟ್ ಗಳಿಸಿ ಮೊದಲ ಸ್ಥಾನ ಪಡೆದಿದೆ.
ಆರ್ಎನ್ಎಸ್ ಮೋರ್ಟಸ್ ಕಂಪನಿ ತನ್ನ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಈ ವರ್ಷ ಮುರ್ಡೇಶ್ವರದ ಶಿವನ ವಿಗ್ರಹಕ್ಕೆ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಿದೆ. ಸುಮಾರು 1 ಲಕ್ಷ ವಿವಿಧ ಸಂಯೋಜನೆಯ ಬೆಳಕಿನ ವ್ಯವಸ್ಥೆ ಇದರಲ್ಲಿದೆ. ಲಿಪ್ಸ್ ಕಂಪನಿ ಅಳವಡಿಸಿದ ಈ ಲೈಟಿಂಗ್ ಅತಿ ಅಪರೂಪವಾಗಿದ್ದು, ಮಾಲ್ಡೀವ್ಸ್ ಸೇರಿ ವಿಶ್ವದ ಅತಿ ಪ್ರಸಿದ್ಧ ಪ್ರವಾಸಿ ತಾಣಗಳ ಬೆಳಕಿನ ಸಂಯೋಜನೆಗೆ ಸರಿ ಸಮನಾಗಿದೆ.