

ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್)ಗೆ ಪ್ರತಿಷ್ಠಿತ ಎನರ್ಜಿ ಟೆಕ್ನಾಲಜಿ ಅವಾರ್ಡ್ ಲಭಿಸಿದೆ. ಮುಂಬೈನ ಸಹರಾ ಸ್ಟಾರ್ ಹೊಟೇಲ್‌ನಲ್ಲಿ ನಡೆದ 25ನೇ ಎನರ್ಜಿ ಟೆಕ್ನಾಲಜಿ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಂದ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಪ್ರಶಸ್ತಿ ಸ್ವೀಕರಿಸಿದರು. ಪೆಟ್ರೋಲಿಯಂ ರಾಜ್ಯ ಸಚಿವ ರಾಮೇಶ್ವರ್ ಥೇಲಿ, ಎಂಆರ್‌ಪಿಎಲ್ ಜಿಜಿಎಂ ನಂದಕುಮಾರ್, ಸಿಜಿಎಂ ಸುಧೀರ್ ಪೈ ಇದ್ದರು. ಕುಲುಮೆ ದಕ್ಷತೆಗಾಗಿ 2019-20ರಲ್ಲಿ ಸಕ್ಷಮ್ ಪ್ರಶಸ್ತಿ ಹಾಗೂ 2021-22ರಲ್ಲಿ ಬೆಸ್ಟ್ ರಿಫೈನರಿ ಆವಿಷ್ಕಾರ ಪ್ರಶಸ್ತಿ ಲಭಿಸಿತ್ತು.