ಮೈಸೂರು: ವಾರ್ಡ್ ಸಂಖ್ಯೆ 37ರ ರಾಘವೇಂದ್ರ ನಗರದ ಕಾವೇರಿ ಶಾಲಾ ಆವರಣದಲ್ಲಿ ಬಡಾವಣೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದ್ದಲ್ಲದೇ ಗುರುವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಜನರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣ ಕೊಡಿಸುವುದರ ಮೂಲಕ ಉತ್ತಮ ನಾಗರಿಕರನ್ನಾಗಿಸಬೇಕು ಎಂದು ಸಲಹೆ ನೀಡಿದರು.
ಸಮುದಾಯ ಶೈಕ್ಷಣಿಕವಾಗಿ ಪ್ರಗತಿಯ ದಾಪುಗಾಲು ಹಾಕುತ್ತಿದೆ. ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಹೇಳಿದರು.
ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ, ಸರಗೂರು ತಾಲೂಕು ತಹಸೀಲ್ದಾರ್ ರುಕಿಯಾ ಬೇಗಂ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷೆ ಪಿ.ರಾಜೇಶ್ವರಿ, ನಗರಪಾಲಿಕೆ ಮಾಜಿ ಸದಸ್ಯರಾದ ಡಿ.ಗೋಪಾಲ್, ಪಿ.ದೇವರಾಜ್, ಮುಖಂಡರಾದ ಜಿ.ಎನ್. ಮಂಜುನಾಥ್, ಲತಾ ರಮೇಶ್, ರಘು ರಾಜೇ ಅರಸ್ , ಶ್ರೀಕಾಂತ್, ಶೇಖರ್, ಮಾಲಯ್ಯ, ಸೋಮಣ್ಣ, ರಾಮಚಂದ್ರ, ಚೆನ್ನಮಲ್ಲಣ್ಣ, ರಾಮಲಿಂಗ,, ಶಿವಕುಮಾರ್, ದುಂಡಶೆಟ್ಟಿ, ಯೋಗಾನರಸಿಂಹಯ್ಯ,ಮಹದೇವ, ಚಂದ್ರು, ಲೀಲಾವತಿ, ಲಕ್ಷ್ಮೀ, ಯಶೋಧ, ಗಣೇಶ್ ಇತರರು ಇದ್ದರು.