ಜವಾಬ್ದಾರಿ ಹೆಚ್ಚಿಸಿದ ಪ್ರಶಸ್ತಿ

sanmana
Published on

ಸವಣೂರ: ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ತಾಲೂಕಿನ ಕಲ್ಮಡವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಿ.ಆರ್. ಹುಬ್ಬಳ್ಳಿ ಹಾಗೂ ಜಯಾ ಹೊಟ್ಟಿಮುದಕಣ್ಣನವರ ಅವರನ್ನು ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶನಿವಾರ ಸನ್ಮಾನಿಸಿದರು.


ಬಿ.ಆರ್. ಹುಬ್ಬಳ್ಳಿ ಮಾತನಾಡಿ, ಶೈಕ್ಷಣಿಕ ಸೇವೆ ಗುರುತಿಸಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದ್ದು, ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಜಗದೀಶಗೌಡ ನಿಂಗನಗೌಡ್ರ, ಗ್ರಾಪಂ ಸದಸ್ಯ ರಮೇಶ ಯಲಿಗಾರ, ಗುರವಪ್ಪ ಅಕ್ಕಿ, ಬಸವಣ್ಣೆಪ್ಪ ಶಿರಬಡಗಿ, ಶಂಕರಗೌಡ ಪಾಟೀಲ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net