

ಬ್ಯಾಡಗಿ: ತಾಲೂಕಿನ ಬುಡಪನಹಳ್ಳಿ ಸರ್ಕಾರಿ ಪ್ರೌಢಶಾಲೆ ಇಂಗ್ಲಿಷ್ ಶಿಕ್ಷಕ, ಸಾಹಿತಿ ಮಾಲತೇಶ ಚಳಗೇರಿ ಅವರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕ ದಿನಾಚರಣೆ ಅಂಗವಾಗಿ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಸಮಾಚಾರ ಸೇವಾ ಸಂಘ ಹಾಗೂ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರಿನ ಕೊಳಚಪ್ಪೆ ಗೋವಿಂದ ಭಟ್ಟ, ಈಶ್ವರ ಮಮದಾಪೂರ, ಬಸವರಾಜ ಉಪ್ಪಾರಟ್ಟಿ, ಇತರರಿದ್ದರು.