ಡಾ.ಎಚ್.ಡಿ.ಚೌಡಯ್ಯ ಹೆಸರಿನ ರಾಜ್ಯಮಟ್ಟದ ಪ್ರಶಸ್ತಿಗೆ ಮೂವರು ಆಯ್ಕೆ: ಸೆ.25ರಂದು ಮಂಡ್ಯ ನಗರದಲ್ಲಿ ಪ್ರದಾನ

Dr. H.D.Choudaiah award ceremony press conference
Published on

ಮಂಡ್ಯ: ಜನತಾ ಶಿಕ್ಷಣ ಟ್ರಸ್ಟ್‌ನಿಂದ ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ಹೆಸರಿನಲ್ಲಿ ಕೊಡಮಾಡುವ 2023ನೇ ಸಾಲಿನ ಶಿಕ್ಷಣ ಪ್ರಶಸ್ತಿಗೆ ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ, ಅಂಕಣ ಸಾಹಿತ್ಯ ಪ್ರಶಸ್ತಿಗೆ ನಿವೃತ್ತ ತಹಸೀಲ್ದಾರ್ ಡಾ.ವಿ.ರಂಗನಾಥ್ ಹಾಗೂ ಕ್ರೀಡಾ ಪ್ರಶಸ್ತಿಗೆ ಪ್ಯಾರಾ ಒಲಂಪಿಕ್ ಕ್ರೀಡಾಪಟು ವೇಣುಗೋಪಾಲ್ ಜಯಚಂದ್ರ ಆಯ್ಕೆಯಾಗಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಮಾತನಾಡಿ, ಡಾ.ಎಚ್.ಡಿ.ಚೌಡಯ್ಯ ಅವರ 96ನೇ ಜನ್ಮದಿನಾಚರಣೆ ಅಂಗವಾಗಿ ಸೆ.25ರಂದು ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಕೆ.ವಿ.ಶಂಕರಗೌಡ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಮೂವರಿಗೂ ತಲಾ 20 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂತೆಯೇ ಹೊಳಲು ಸರ್ಕಾರಿ ಶಾಲೆಯ ಎಚ್.ವಿ.ಮೇಘನಾ, ಎಚ್.ಜೆ.ವಿನಯ್, ಹೊಳಲು ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ಜೆ.ದೀಕ್ಷಾ ಹಾಗೂ ಸಿ.ಜೆ.ತೇಜಸ್ ಅವರಿಗೆ ತಲಾ ಎರಡು ಸಾವಿರ ರೂ ಜತೆಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ವಿವರಿಸಿದರು.

ಅಂದು ಬೆಳಗ್ಗೆ 11ಗಂಟೆಗೆ ಆಯೋಜಿಸಿರುವ ಸಮಾರಂಭದ ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ವಹಿಸುವರು. ದಕ್ಷಿಣ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡುವರು. ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಹಾಗೂ ಧರ್ಮದರ್ಶಿ ಎಚ್.ಸಿ.ಮೋಹನ್‌ಕುಮಾರ್ ಭಾಗವಹಿಸುವರು ಎಂದರು.

ಉಪಾಧ್ಯಕ್ಷ ಎಂ.ವಿ.ಶ್ರೀಧರ್, ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net