ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕೌಶಲತೆ ಬೆಳೆಸಿಕೊಳ್ಳಲಿ: ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಸಲಹೆ

Award ceremony for achievers Mandya
Published on

ಮಂಡ್ಯ: ಪ್ರಸ್ತುತ ಸನ್ನಿವೇಶದಲ್ಲಿ ಕೌಶಲತೆ ಶಿಕ್ಷಣ ಅವಶ್ಯಕವಾಗಿದೆ. ಕೈಗಳಲ್ಲಿ ಕೆಲಸವಿದ್ದರೆ ಎಲ್ಲಿ ಬೇಕಾದರೂ ಜೀವನ ರೂಪಿಸಿಕೊಳ್ಳ ಬಹುದು. ಆದ್ದರಿಂದ ಕಲಿಕೆ ಜತೆಗೆ ಕೌಶಲತೆ ಕಡೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಸಲಹೆ ನೀಡಿದರು.

ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ಜಿ.ವಿ.ಕೆ ಪ್ರತಿಷ್ಠಾನದ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಿ.ವಿ.ಕೆ ಪ್ರತಿಷ್ಠಾನ ಕಳೆದ 9 ವರ್ಷದಿಂದ ಸರ್ಕಾರಿ ಶಾಲೆಗೆ ಕುರ್ಚಿ, ಟೇಬಲ್ ಸೇರಿದಂತೆ ಅಗತ್ಯವುಳ್ಳ ಪರಿಕರ ವಿತರಿಸುತಿದೆ. ಸರ್ಕಾರಿ ಶಾಲೆಗಳು ಉಳಿಯಬೇಕೆಂದು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಮಾತನಾಡಿ, ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ನನಗೆ ಸಿಕ್ಕಿರುವುದು ಮಂಡ್ಯ ಜಿಲ್ಲೆಗೆ ಸಂದ ಗೌರವ. ಅಂಗವಿಕಲರ ಶಕ್ತಿ ದೇಶಕ್ಕೆ ಬೇಕು ಎಂದು ಪಾಲಕರು ಮಕ್ಕಳನ್ನು ಬೆಳೆಸಬೇಕು. ಮನಸ್ಸು, ಧೈರ್ಯ, ಛಲ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪ್ರತಿಷ್ಠಾನದ ಅಧ್ಯಕ್ಷ ಆರ್.ವಾಸು, ಸುನೀತಾಮಣಿ, ಮಹೇಶ್ ಚಂದ್ರಗುರು, ಮಳವಳ್ಳಿ ಶ್ರೀನಿವಾಸ ಇತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿವರಾಂ ಯರಹಳ್ಳಿ, ರಂಗಸ್ವಾಮಿ, ಕೆ.ಎಸ್.ಚರಣ್‌ಶೇಖರ್, ಬಿ.ಎನ್.ಶ್ವೇತಾ, ಎಂ.ಎಂ.ನಾಗರಾಜು, ತೈಲೂರು ಆನಂದಚಾರಿ, ಟಿ.ರಘು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net