ಕನ್ನಡದ ವಿದ್ಯಾರ್ಥಿಗಳಿಗೆ ಶೇ.5 ಕೃಪಾಂಕ ನೀಡಿ

mkg1c
Published on

ಚನ್ನಗಿರಿ: ಸರ್ಕಾರ ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಹುದ್ದೆ ನೀಡುವಾಗ ಗ್ರಾಮೀಣ ಕೃಪಾಂಕ ನೀಡುವಂತೆ, ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ. 5ರಷ್ಟು ಕೃಪಾಂಕ ನೀಡಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಶ್ರೀಗಳು ಆಶಿಸಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕನ್ನಡ ಅಭಿಮಾನಿ ಬಳಗದಿಂದ ಎಸ್‌ಎಸ್‌ಎಲ್‌ಸಿ ಕನ್ನಡದಲ್ಲಿ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕನ್ನಡ ಕಸ್ತೂರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಕನ್ನಡ ನಾಡಿನಲ್ಲಿ ಕನ್ನಡ ಉಳಿಸಲು ಹೋರಾಟ ನಡೆಸುತ್ತಿರುವುದು ಬೇಸರದ ಸಂಗತಿ. ಇಂತಹ ಪರಿಸ್ಥಿತಿ ಯಾವ ಭಾಷೆಗೂ ಬರಬಾರದು ಎಂದರು.

ಪತ್ರಕರ್ತ ಬಾ.ರಾ. ಮಹೇಶ್ ಮಾತನಾಡಿ, ನಮ್ಮ ಭಾಷೆಯ ಉಳಿವು ಅಳಿವು ನಮ್ಮ ಕೈಯಲ್ಲಿದೆ. ನಮ್ಮ ಮಕ್ಕಳು ಮೊದಲು ಕನ್ನಡ ಶಾಲೆಯಲ್ಲಿ ಕನ್ನಡ ಕಲಿಯುವಂತ ವಾತಾವರಣ ಸೃಷ್ಠಿಯಾಗಬೇಕು ಎಂದರು.

ಜಿಲ್ಲಾ ಕಸಾಪ ಸಂಚಾಲಕ ಸಿರಾಜ್ ಆಹ್ಮದ್, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕೋರಿ, ಕನ್ನಡ ಅಭಿಮಾನಿ ಬಳಗದ ಅಧ್ಯಕ್ಷ ಡಾ.ಎಸ್. ಶಂಕರಪ್ಪ, ಬೊಮ್ಮೇನಹಳ್ಳಿ ಮಹೇಶ್, ಜಕ್ಕಲಿ ಶಿವಮೂರ್ತಿ, ಕಮಲಾಕ್ಷ ಸೇಠ್, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಂ. ಜಯಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net