

ಧಾರವಾಡ: ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ೩೭ನೇ ರಾಷ್ಟಿçÃಯ ಅಂತರ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಭಾಗವಹಿಸಿದ್ದ ನಗರದ ಜೆೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ.
ಚರ್ಚಾಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಅನನ್ಯ ಕಡಕೋಳ, ಮಿಮಿಕ್ರಿಯಲ್ಲಿ ತೃತೀಯ ಸ್ಥಾನ ಪಡೆದ ವರುಣ ಮಾಲಿ ಅವರನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಅಭಿನಂದಿಸಿದರು.
ಜೆ.ಎಸ್.ಎಸ್. ಕಾಲೇಜಿನ ಅಭಿವೃದ್ಧಿ ಅಽಕಾರಿ ಡಾ. ಸೂರಜ ಜೈನ್, ಪ್ರಾಚಾರ್ಯ ಡಾ. ಕೆ.ಎಚ್. ನಾಗಚಂದ್ರ, ಅಧ್ಯಾಪಕರಾದ ಟಿ.ಎಂ. ಶ್ರೀಧರ ಹಾಗೂ ಡಾ. ಆರ್.ಎಂ. ಪತ್ತಾರ ಉಪಸ್ಥಿತರಿದ್ದರು.