ವಿನೋದ್ ಮೂಡಗದ್ದೆಗೆ ಪ್ರಶಸ್ತಿ

award
Published on

ಮಡಿಕೇರಿ:

ಕೊಡಗು ಪತ್ರಕರ್ತರ ಸಂಘದಿAದ ಅತ್ಯುತ್ತಮ ವರದಿಗಳಿಗೆ ನೀಡಲಾಗುವ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು ವಿಜಯವಾಣಿಯ ಗೋಣಿಕೊಪ್ಪಲು ವರದಿಗಾರ ವಿನೋದ್ ಮೂಡಗದ್ದೆ ಸೇರಿ 7 ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅತ್ಯುತ್ತಮ ಗ್ರಾಮೀಣ ವರದಿಗಾಗಿ ವಿಜಯವಾಣಿಯಲ್ಲಿ ಪ್ರಕಟಗೊಂಡ 'ಸೌಲಭ್ಯ ವಂಚಿತ ನಾಗರ ಹೊಳೆ ಆಶ್ರಮ ಶಾಲೆ' ಎಂಬ ವರದಿಗೆ ವಿನೋದ್ ಮೂಡಗದ್ದೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಉಳಿದಂತೆ ವಿವಿಧ ಪತ್ರಿಕೆಗಳ ವರದಿಗಾರರಾದ ಹೆಚ್.ಟಿ. ಅನಿಲ್, ಡಿ.ಪಿ.ಲೋಕೇಶ್, ವಿಘ್ನೇಶ್ ಭೂತನಕಾಡು, ಉಷಾ ಪ್ರೀತಮ್, ಟಿ.ಜೆ.ಪ್ರವೀಣ್ ಹಾಗೂ ಟಿವಿ 1 ದೃಶ್ಯವಾಹಿನಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಭಾನುವಾರ (ಮಾ.9) ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯುವ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net