2022 ಮತ್ತು 23ನೇ ಸಾಲಿನ ಗೌರವ ಪ್ರಶಸ್ತಿಗಳು ಪ್ರಕಟ

AWARD
Published on

ಮಡಿಕೇರಿ:

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 2022 ಮತ್ತು 23ನೇ ಸಾಲಿನ ಗೌರವ ಪ್ರಶಸ್ತಿಗಳು ಪ್ರಕಟವಾಗಿದ್ದು, ಫೆ.28ಕ್ಕೆ ಮಡಿಕೇರಿ ಗೌಡ ಸಮಾಜದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ತಿಳಿಸಿದ್ದಾರೆ.

ಅಂದು ಬೆಳಗ್ಗೆ 10 ಗಂಟೆಯಿAದ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸೇರಿದಂತೆ ಗಣ್ಯರು ಪಾಲ್ಗೊಳ್ಳುವರು. ಗೌರವ ಪ್ರಶಸ್ತಿಗಳು 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಡಾ. ಕೆ.ವಿ. ಪುರುಷೋತ್ತಮ, ಬೇಕಲ್ ಲೀಲಾವತಿ, ಲೋಕೇಶ್ ಪೆರ್ಲಂಪಾಡಿ, ಕೆ.ಆರ್. ವಿದ್ಯಾಧರ, ಕೆ.ಆರ್. ತೇಜಕುಮಾರ್, ಸಂಗೀತ ರವಿರಾಜ್, ಡಿ.ಸಿ. ನಂಜುAಡ, ಸೀತಾರಾಮ ಕೇವಳ, ಗೋಪಾಲ ಪೆರಾಜೆ, ಡಾ. ನಾರಾಯಣ ಶೇಡಿಕಜೆ, ಪಿ.ಎಸ್. ಚರಣ್ ಐವರ್ನಾಡು ಹಾಗೂ ಡಾ. ಕೋರನ ಸರಸ್ವತಿ ನಡೆಸಿದ ಫೆಲೋಶಿಫ್ ಅಧ್ಯಯನದ ಸಂಶೋಧನಾ ಪ್ರಬಂಧಗಳನ್ನು ಬಿಡುಗಡೆ ಮಾಡಲಾಗುವುದು.

ವಿಮಲಾ ಅರುಣಾ ಅವರ 'ಸೂಂತಿ' ಕವನ ಸಂಕಲನ, ಕುಕ್ಕನೂರು ರೇಷ್ಮಾ ಮನೋಜ್ ಅವರ ಅವರ 'ಹೆಜ್ಜೆಲಿರ್‌ವ ಕಥೆಗ'

ಕಥಾ ಸಂಕಲನ, ಲೀಲಾದಾಮೋದರ ಅವರ 'ಸಾಲು ದೀಪ' ಲೇಖನ, ಎಡಿಕೇರಿ ವಿಶ್ವನಾಥ ಅವರ ಅರೆಭಾಷೆ ಕಾದಂಬರಿ 'ನೇತ್ರಾವತಿಯಿಂದ ಕಾವೇರಿಗೆ', ಎಂ.ಜಿ ಕಾವೇರಮ್ಮ ಅವರ ಲೇಖನ 'ಅರೆಭಾಷೆ ಜನಂಗಳ ಬೊದ್ಕ್ನ ಸೊಗ್ಸ್', ಬಾರಿಯಂಡ ಜೋಯಪ್ಪ ಅವರ ಕವನ ಸಂಕಲನ 'ಆಕಾಶ ಚಪ್ಪರ', ಕೊಟ್ಟಕೇರಿಯನ ಲೀಲಾ ದಯಾನಂದ ಅವರ ಲಲಿತ ಪ್ರಬಂಧ 'ನಮ್ಮಪ್ಪ ಸಾಂಕಿದ ಹೇಂಟೆಗ', ಜಯಪ್ರಕಾಶ್ ಕುಕ್ಕೇಟಿ ಅವರ ಅರೆಭಾಷೆ ನಾಟಕ 'ಅಮರ ಕ್ರಾಂತಿ', ಹೊದ್ದೇಟಿ ಭವಾನಿಶಂಕರ್ ಅವರ ಕವನ ಸಂಕಲನ 'ಸಮಗ್ರ ಬದ್‌ಕ್', ಉದಯಕುಮಾರಿ ಚೆಂಬು ಅವರ ಲೇಖನ 'ನಮ್ಮರ‍್ನ ಯಕ್ಷಗಾನಲಿ ನಾವ್', ಕಟ್ರತನ ಲಲಿತಾ ಅಯ್ಯಣ್ಣ ಅವರ ಕವನ ಸಂಕಲನ 'ಹಿಮಸಾಗರ', ಡಾ. ಕೋರನ ಸರಸ್ವತಿ ಅವರ ವಿಚಾರ ಸಾಹಿತ್ಯ 'ಕಣಜ' ಬಿಡುಗಡೆ ಆಗಲಿದೆ. ಅರೆಭಾಷೆ ಮಾತನಾಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಕಲಾವಿದರಿಗೆ ಇದೇ ಸಂದರ್ಭ ವಾದ್ಯಪರಿಕರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಅಕಾಡೆಮಿ ಸದಸ್ಯರಾದ ಪುಳಕಂಡ ಸಂದೀಪ್, ಪೊನ್ನಚನ ಮೋಹನ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net