ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ

jayarangantah
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ 70 ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂವರು ಸಾಧಕರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಗರಿ ಒಲಿದಿದೆ.

ಮೊದಲೇ ನಿರ್ಧರಿಸಿದಂತೆ ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 13 ಮಂದಿ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ ಮಾಡಲಾಗಿದ್ದು ಇದರಲ್ಲಿ ಗ್ರಾಮಾಂತರ ಜಿಲ್ಲೆಯ ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಜಿಲ್ಲೆಯ ಗೌರವ ಹೆಚ್ಚಿಸಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ರೂ. ನಗದನ್ನು ಒಳಗೊಂಡಿದೆ. ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಜಯರಂಗನಾಥ್

ದೊಡ್ಡಬಳ್ಳಾಪುರ ತಾಲೂಕು ವಡಗೆರೆ ಗ್ರಾಮದಲ್ಲಿ ಜನಿಸಿದ ಡಾ.ಜಯರಂಗನಾಥ್ ಅವರಿಗೆ ಆಡಳಿತ ಕ್ಷೇತ್ರದ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. 60 ವರ್ಷ ವಯಸ್ಸಿನ ಜಯರಂಗನಾಥ್ ಅವರು ಗುಜರಾತಿನ ಎನ್‌ಚ್‌ಎಲ್ ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಮೆಡಿಷನ್‌ನಲ್ಲಿ ಅಧ್ಯಯನ ನಡೆಸಿದ್ದು, ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜು ಮತ್ತು ಜೆ.ಜೆ.ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗದಲ್ಲಿ ತರಬೇತಿ ಪೂರ್ಣಗೊಳಿಸಿ 1995ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಸೋಧನಾ ಸಂಸ್ಥೆಯಲ್ಲಿ ಮಕ್ಕಳ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2021ರಿಂದ 2023ರವರೆಗೆ ಜಿಠ್ಟಿಜ್ಚಿ ಇಟ್ಟಜಿಚ್ಚ ಖಟ್ಚಜಿಠಿ ಟ್ಛ ಐ್ಞಜಿದ ಗೌರವ ಕಾರ್ಯದರ್ಶಿಯಾಗಿ ನಂತರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪೌರಕಾರ್ಮಿಕ ಮಹಿಳೆಗೆ ಒಲಿದ ಪ್ರಶಸ್ತಿ:

72 ವರ್ಷ ವಯಸ್ಸಿನ ಪೌರಕಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪಕೀರಿ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ ಸಮಾಜಸೇವೆಗೆ ಈ ಪ್ರಶಸ್ತಿ ಒಲಿದಿದೆ. ಗ್ರಾಮಾಂತರ ಜಿಲ್ಲೆಯ ನಿವಾಸಿಯಾದ ಇವರು ಸುಮಾರು ವರ್ಷಗಳಿಂದ ರಸ್ತೆಗಳನ್ನು ಗುಡಿಸುವುದು, ಒಳಚರಂಡಿಗಳನ್ನು ಸ್ವಚ್ಛ ಮಾಡುವ ಕಾಯಕದಲ್ಲಿ ನಿರತರಾಗಿದ್ಧಾರೆ ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಹಗಲು ರಾತ್ರಿಯೆನ್ನದೆ ತಮ್ಮ ಜೀವನವನ್ನು ಪೌರಕಾರ್ಮಿಕ ವೃತ್ತಿಯಲ್ಲಿಯೇ ತೊಡಗಿಸಿಕೊಂಡಿರುತ್ತಾರೆ. ಇವರ ಪರಿಶ್ರಮವನ್ನು ಪರಿಗಣಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ೋಷಿಸಿದೆ.

 ವೀಣೆ ಪರಂಪರೆಯ ಪೆನ್ನಹೋಬಳಯ್ಯ

ದೊಡ್ಡಬಳ್ಳಾಪುರ ತಾಲೂಕು ಸಿಂಪಾಡಿಪುರ ಗ್ರಾಮದ ವೀಣೆ ತಯಾರಕ ಪೆನ್ನ ಒಬಳಯ್ಯ ಅವರಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಂಕೀರ್ಣ ಕ್ಷೇತ್ರದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಧುರೆ ಹೋಬಳಿಯ ಸಿಂಪಾಡಿಪುರ ಗ್ರಾಮದಲ್ಲಿ ವೀಣೆ ತಯಾರಿಕೆಯ ಪರಂಪರೆ ಪ್ರಾರಂಭಿಸಿದ ಪೆನ್ನ ಒಬಳಯ್ಯ ವೀಣೆ ತಯಾರಕರಲ್ಲಿ ಕೆಲಸ ಮಾಡುತ್ತಾ ಕಲೆಯನ್ನು ಕಲಿತರು ಮತ್ತು ನಂತರ ತಮ್ಮ ಗ್ರಾಮ ಸಿಂಪಾಡಿಪುರ ಬಂದು ಈ ಕರಕುಶಲತೆಯನ್ನು ಗ್ರಾಮಸ್ಥರಿಗೆ ಕಲಿಸಿದರು.50 ವರ್ಷಗಳಿಂದಲೂ ವೀಣೆ ತಯಾರಿಸುತ್ತಾ ಬಂದಿರುವ ಈ ಗ್ರಾಮವು ಈಗಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಮೈಸೂರು ವೀಣೆಗಳನ್ನು ಇಲ್ಲಿ ತಯಾರಿಸಲಾಗುತ್ತದೆ.ವೀಣೆ ತಯಾರಿಕೆಯ ಪರಂಪರೆಯನ್ನು ಮುಂದುವರಿಸಲು ಹೊಸ ತಲೆಮಾರಿನ ಪ್ರತಿಭೆಗಳು ಈ ಕರಕುಶಲತೆಯನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿವೆ. ಸಿಂಪಾಡಿಪುರ ಗ್ರಾಮದಲ್ಲಿತ ಯಾರಾಗುವ ವೀಣೆಗಳು ಹೆಸರಾಂತ ಸಂಗೀತ ಕಲಾವಿದರ ಕೈಯಲ್ಲಿವೆ. ಸಾಮಾನ್ಯವಾಗಿ ವೀಣೆಗಳು ಸಿದ್ಧಗೊಳ್ಳುವುದು ತಮಿಳುನಾಡಿನ ತಂಜಾವೂರಿನಲ್ಲಿ, ನಂತರ ವೀಣೆ ತಯಾರಿಕೆಯಲ್ಲಿ ಗಮನ ಸೆಳೆದಿರುವುದು ಬೆಂಗಳೂರು ಬಳಿಯ ಸಿಂಪಾಡಿಪುರ ಗ್ರಾಮ.ಕಳೆದ ಐವತ್ತು ವರ್ಷಗಳಿಂದ, ಈ ಊರಿನಲ್ಲಿ ವೀಣೆ ಮತ್ತು ತಂಬೂರಿಗಳನ್ನು ತಯಾರು ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net