

ಮಡಿಕೇರಿ:
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ವಿಜಯವಾಣಿಯ ಶನಿವಾರಸಂತೆ ವರದಿಗಾರ ದಿನೇಶ್ ಮಾಲಂಬಿ 2 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಪ್ರಶಸ್ತಿಯನ್ನು 'ರಜೆಯಲ್ಲಿ ಮೈದಳೆದ ಈಜುಕೊಳ''ವರದಿಗೆ ಮತ್ತು ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ಪ್ರಶಸ್ತಿಯನ್ನು 'ಕೃಷಿಯಲ್ಲಿ ಸಹೋದರರ ಕಮಾಲ್' ವರದಿಗೆ ದಿನೇಶ್ ಮಾಲಂಬಿ ಅವರಿಗೆ ಬಂದಿದೆ.
ಉಳಿದಂತೆ ವಿವಿಧ ವಿಭಾಗಳಲ್ಲಿ ಪ್ರಕಟವಾಗಿರುವ ಪ್ರಶಸ್ತಿಗಳನ್ನು ಪತ್ರಕರ್ತರಾದ ಅಣ್ಣೀರ ಹರೀಶ್ ಮಾದಪ್ಪ, ಇಸ್ಮಾಯಿಲ್ ಕಂಡಕೆರೆ, ಆರ್.ಆರ್. ಮನೋಜ್, ಸಂತೋಷ್ ರೈ, ಹೆಚ್.ಕೆ. ಜಗದೀಶ್, ಹೆಚ್.ಇ. ರವಿ, ಜಗದೀಶ್ ಜೋಡುಬೀಟಿ, ಐಮಂಡ ಗೋಪಾಲ್ ಸೋಮಯ್ಯ, ಬಾಚರಣಿಯಂಡ ಅನುಕಾರ್ಯಪ್ಪ, ಶಿವರಾಜ್, ಪಿ.ವಿ.ಅಕ್ಷಯ್, ಹೆಚ್.ಜೆ. ರಾಕೇಶ್, ಎಂ.ಎನ್.ಚAದ್ರಮೋಹನ್, ಕಿಶೋರ್ ಕುಮಾರ್ ಶೆಟ್ಟಿ ಹೆಸರು ಪ್ರಕಟಣ ಆಗಿದೆ.
ಈ ಎಲ್ಲಾ ಪ್ರಶಸ್ತಿಗಳನ್ನು ಸಂಘದ ವಾರ್ಷಿಕ ಮಹಾಸಭೆ ನಡೆಯುವ ದಿನದಂದು ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.