ತಂಬಾಕು, ಮಾದಕವಸ್ತು ಸೇವನೆ ತ್ಯಜಿಸಿ

Avoid tobacco and drug use
ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ತಂಬಾಕು ವ್ಯಸನ ಮುಕ್ತಿ ಕೇಂದ್ರವನ್ನು ಕುಲಪತಿ ಡಾ. ಆರ್​.ಎಸ್​. ಮುಧೋಳ ಉದ್ಘಾಟಿಸಿದರು. ಡಾ. ರಾಜೇಶ ಹೊನ್ನುಟಗಿ, ಡಾ. ಸಂತೋಷ ರಾಮದುರ್ಗ, ಡಾ. ಎಸ್​.ಪಿ. ಚೌಕಿಮಠ ಮತ್ತಿತರರಿದ್ದರು.
Published on

ವಿಜಯಪುರ: ತಂಬಾಕು ಮತ್ತು ಮಾದಕವಸ್ತು ಸೇವನೆ ಒಂದು ದೊಡ್ಡ ಸಮಸ್ಯೆಯಾಗಿದ್ದು, ಅದನ್ನು ತಡೆಯಲು ಎಲ್ಲರೂ ಜಂಟಿಯಾಗಿ ಹೋರಾಟ ನಡೆಸಬೇಕಿದೆ ಎಂದು ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್​.ಎಸ್​. ಮುಧೋಳ ಕರೆ ನೀಡಿದರು.

ನಗರದ ಬಿಎಲ್​ಡಿಇ ವಿವಿಯ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಮಂಗಳವಾರ ತಂಬಾಕು ವ್ಯಸನ ಮುಕ್ತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ತಂಬಾಕು ವ್ಯಸನ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಒಂದು ದೊಡ್ಡ ಜಾಡ್ಯವಾಗಿ ಬೆಳೆದಿದೆ.

ಸರ್ಕಾರಗಳು, ವೈದ್ಯರು ಹಾಗೂ ಬೇರೆ ಬೇರೆ ಸಂ& ಸಂಸ್ಥೆಗಳು ಇದನ್ನು ತಡೆಯಲು ಹೋರಾಟ ನಡೆಸಿದ್ದು, ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕಿಯ ಸಂಸ್ಥೆ ಸದ್ಯ ದೇಶದ ಪ್ರತಿಯೊಂದು ವೈದ್ಯಕಿಯ ಕಾಲೇಜುಗಳಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ತೆರೆಯಲು ನಿರ್ಧರಿಸಿವೆ ಎಂದು ತಿಳಿಸಿದರು.

ಜನತೆಯ ಆರೋಗ್ಯದ ಬಗೆಗೆ ಸದಾ ತುಡಿಯುವ, ಅಪಾರ ಸಾಮಾಜಿಕ ಕಳಕಳಿ ಹೊಂದಿರುವ ಕೇಂದ್ರ ಆಸ್ಪತ್ರೆಯ ಮನೋವೈದ್ಯಕಿಯ ವಿಭಾಗದ ಒಪಿಡಿ ಸಂಖ್ಯೆ 19 ರಲ್ಲಿ ತಂಬಾಕು ವ್ಯಸನ ಮುಕ್ತಿ ಕೇಂದ್ರ ಪ್ರಾರಂಭವಾಗಿದ್ದು, ಅಲ್ಲಿ ಪರಿಣಿತ ಆಪ್ತ ಸಲಹಾಕಾರರು, ವೈದ್ಯರು ಲಭ್ಯರುತ್ತಾರೆ. ಅಲ್ಲದೆ, ವ್ಯಸನ ತಡೆಗಟ್ಟಲು ಅಗತ್ಯವಿರುವ ತಪಾಸಣೆ ಪರೀೆಗಳು, ಔಷಧೋಪಚಾರಗಳು ದೊರೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಆಸ್ಪತ್ರೆಯ ವೈದ್ಯಕಿಯ ಅಧೀಕ ಡಾ. ರಾಜೇಶ ಹೊನ್ನುಟಗಿ, ಮನೋವೈದ್ಯಕಿಯ ವಿಭಾಗದ ಮುಖ್ಯಸ್ಥ ಡಾ. ಸಂತೋಷ ರಾಮದುರ್ಗ, ಡಾ. ಎಸ್​.ಪಿ. ಚೌಕಿಮಠ, ಡಾ. ಕಳಸಗೋಂಡ, ಡಾ. ಗೌತಮಿ, ಡಾ. ಕೀರ್ತಿವರ್ಧನ ಕುಲಕರ್ಣಿ, ಡಾ. ಶ್ರೀಶೈಲ ಅಂಜುಟಗಿ, ಡಾ. ಸಂದೀಪ, ಡಾ. ಪೂಜಾ, ಸಿಬ್ಬಂದಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net