

ಲಕ್ಷೆ್ಮೕಶ್ವರ: ಪಟ್ಟಣದಲ್ಲಿ ಮತ್ತೆ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು, ಬೀದಿನಾಯಿಗಳ ಹಾವಳಿಯಿಂದ ಮಕ್ಕಳು, ವೃದ್ಧರ್ನು ರಕ್ಷಿಸುವಂತೆ ಎಂದು ಆಗ್ರಹಿಸಿ ಸಾರ್ವಜನಿಕರು ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಮತ್ತು ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪುರಸಭೆ ಮಾಜಿ ಸದಸ್ಯ ಅನಿಲ ಮುಳಗುಂದ ಮತ್ತು ಯಲ್ಲಪ್ಪ ಹಂಜಗಿ ಅವರು ಹುಲಗೇರಿ ಬಣ ವಾರ್ಡ್ 20 ಪುರಸಭೆ ಹಿಂಭಾಗದಲ್ಲಿ ಸೇರಿ ಅನೇಕ ಕಡೆಗಳಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಬೀದಿ ನಾಯಿಗಳು ಅಬಾಲವೃದ್ಧರಾದಿಯಾಗಿ ದಾಳಿ ನಡೆಸುತ್ತಿದೆ. ಮನೆಯಲ್ಲಿ ತಾಯಂದಿರು ಮಕ್ಕಳನ್ನು ಹೊರಗಡೆ ಬಿಡಲು ಭಯಪಡುವಂತಾಗಿದೆ. ಕೂಡಲೇ ಪುರಸಭೆಯವರು ಕ್ರಮ ತೆಗೆದುಕೊಂಡು ಬೀದಿ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಹಾಗೂ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ಬೀದಿ ನಾಯಿಗಳ ನಿಯಂತ್ರಣಕ್ಕೆ ಈ ಹಿಂದೆ ಕ್ರಮ ತೆಗೆದುಕೊಂಡಿದ್ದರು. ಆದರೆ, ಇದೀಗ ಮತ್ತೆ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಜನರ ಮೇಲೆರಗಿ ದಾಳಿ ನಡೆಸುವ ದೂರುಗಳು ಬರುತ್ತಿದ್ದು, ಆಡಳಿತ ಮಂಡಳಿಯವರೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಟಾಕಪ್ಪ ಸಾತಪುತೆ, ಎನ್.ಎಚ್. ಶೆರಸೂರಿ, ಶಶಿಕುಮಾರ ಸಾತಪುತೆ, ಅಭಿಷೇಕ ಸಾತಪುತೆ, ಸಿದ್ದಪ್ಪ ಗದ್ದಿ, ದೇವಪ್ಪ ಸಾತಪುತೆ, ಇತರರಿದ್ದರು.