

ಪುತ್ತೂರು: ಸಹಕಾರಿ ಕ್ಷೇತ್ರ ಅತ್ಯಂತ ಯಶಸ್ವಿಯಾಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಉದ್ಯಮಗಳನ್ನು ಬೆಳೆಸಲು ಹಲವಾರು ಸವಾಲುಗಳಿದೆ. ವ್ಯವಹಾರದಲ್ಲಿ ಬಹಳಷ್ಟು ಜಾಗರೂಕತೆ, ಜವಾಬ್ದಾರಿಯ ಅಗತ್ಯವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ನೆಲ್ಲಿಕಟ್ಟೆಯಲ್ಲಿ ದ.ಕ. ಜಿಲ್ಲಾ ಮಟ್ಟದ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ ಸಂದರ್ಭ ಲಾಂಛನ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಸಂಘದ ಕಚೇರಿಯನ್ನು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ರಾಜ್ಯಾಧ್ಯಕ್ಷ ಸಿ.ಜೆ.ಗಂಗಾಧರ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ ಸಾಲಪತ್ರ ವಿತರಿಸಿದರು. ಭದ್ರತಾ ಕೋಶವನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಗಣಕಯಂತ್ರವನ್ನು ಎಸ್‌ಸಿಡಿ ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು ಉದ್ಘಾಟಿಸಿದರು. ಠೇವಣಿ ಪತ್ರವನ್ನು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ವಿತರಿಸಿದರು.
ಸಂಘದ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬಂಟ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ, ಸೊಸೈಟಿ ನಿರ್ದೇಶಕರಾದ ಗುಡ್ಡಪ್ಪ ಗೌಡ ಬಲ್ಯ, ಸೀತಾರಾಮ ಕೇವಳ, ಟಿ.ಗಂಗಯ್ಯ ಗೌಡ, ಜಯಪ್ರಕಾಶ್ ಕಳುವಾಜೆ, ಎಚ್. ಸುಂದರ ಗೌಡ, ಪದ್ಮಪ್ಪ ಗೌಡ ಕೆ., ಗಂಗಾಧರ ಎ. ವಿ., ಕೆ. ಮಾಧವ ಗೌಡ, ಮೋಹನ್ ಜಿ., ವೇದಾವತಿ, ಉಷಾಲಕ್ಷ್ಮೀ ಕೆ., ಮುಖ್ಯ ಕಾರ್ಯನಿರ್ವಹಣಾಽಕಾರಿ ಸೀತಾರಾಮ ಗೌಡ ಉಪಸ್ಥಿತರಿದ್ದರು. ಮುಖ್ಯ ಪ್ರವರ್ತಕ ಎ. ವಿ. ನಾರಾಯಣ ಸ್ವಾಗತಿಸಿದರು. ಉಪಾಧ್ಯಕ್ಷ ಉಮೇಶ್ ಮಳುವೇಲು ವಂದಿಸಿದರು. ವಸಂತ ವೀರಮಂಗಲ, ಪ್ರತಿಭಾದೇವಿ ಕಾರ್ಯಕ್ರಮ ನಿರೂಪಿಸಿದರು.