ನಗರದಲ್ಲಿ ಎವಿಇಎಸ್ ವೋಟಿಂಗ್ ನೀರಸ

Vijayavani-logo
Published on

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯವರ ವ್ಯಾಪ್ತಿಯಲ್ಲಿ ಬರುವ 3 ಲೋಕಸಭಾ ಕ್ಷೇತ್ರಗಳಲ್ಲಿ ಅಗತ್ಯ ಸೇವೆ ಸಿಬ್ಬಂದಿಗಳ (ಎವಿಇಎಸ್) ಅಂಚೆ ಮತದಾನ ನೀರಸವಾಗಿ ನಡೆದಿದೆ.

ಈ ಬಾರಿ ಎವಿಇಎಸ್ ಮತದಾರರಿಗೆ ಮೊದಲೇ ಸೂಚನೆ ನೀಡಿ ಹೆಸರು ನೋಂದಾಯಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಲಾಗಿತ್ತು. ಆದರೂ, ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಸೆಂಟ್ರಲ್ ಕ್ಷೇತ್ರಗಳಲ್ಲಿ ಒಟ್ಟು 1,348 ಮಂದಿ ಈ ಹಕ್ಕು ಪಡೆದಿದ್ದರು. ಇದಕ್ಕಾಗಿ ಆಯಾ ಕ್ಷೇತ್ರಗಳಲ್ಲಿ ತಲಾ ಒಂದು ಕಡೆ ಮತದಾನ ಕೇಂದ್ರವನ್ನು ತೆರೆಯಲಾಗಿತ್ತು.

ಏ.19ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶುಕ್ರವಾರ ಹಾಗೂ ಶನಿವಾರ ನಡೆದ ಎವಿಇಎಸ್ ಅಂಚೆ ಮತದಾನದ ವೇಳೆ 220 ಮಂದಿ ಮಾತ್ರ ತಮ್ಮ ಮತ ಚಲಾವಣೆ ಮಾಡಿದ್ದಾರೆ. ಭಾನುವಾರ ಎವಿಇಎಸ್​​ ಮತದಾರರಿಗೆ ಕೊನೆಯ ಅವಕಾಶ ಇರಲಿದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿಯವರ ಕಚೇರಿಯು ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net