ಅಧ್ಯಕ್ಷರಾಗಿ ಆವರ್ತಿ.ಆರ್.ಮಹದೇವಪ್ಪ ಆಯ್ಕೆ

ಅಧ್ಯಕ್ಷರಾಗಿ ಆವರ್ತಿ.ಆರ್.ಮಹದೇವಪ್ಪ ಆಯ್ಕೆ
Published on

ಕುಶಾಲನಗರ: ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಅಧ್ಯಕ್ಷರಾಗಿ ಆವರ್ತಿ.ಆರ್.ಮಹದೇವಪ್ಪ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ಮಡಿಕೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆ ನಡೆದು ನೂತನ ಆಡಳಿತ ಮಂಡಳಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಸೋಮವಾರಪೇಟೆಯ ವಸಂತ್, ಉಪಾಧ್ಯಕ್ಷರಾಗಿ ಮಡಿಕೇರಿಯ ರೋಷನ್, ಖಜಾಂಚಿಯಾಗಿ ಪ್ರಕಾಶ್ ಚೇರಂಬಾಣೆ, ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ ಲವಕುಮಾರ್, ಸಹ ಕಾರ್ಯದರ್ಶಿಯಾಗಿ ದಕ್ಷಿಣ ಕೊಡಗಿನ ಸುನೀಲ್, ಸಂಘಟನಾ ಕಾರ್ಯದರ್ಶಿಯಾಗಿ ಸೋಮವಾರಪೇಟೆಯ ಚಂದನ ಸುಬ್ರಮಣಿ, ಕ್ರೀಡಾ ಕಾರ್ಯದರ್ಶಿಯಾಗಿ ಡಾಡು ಜೋಸೆಫ್, ನಿರ್ದೇಶಕರಾಗಿ ಮಡಿಕೇರಿಯ ಪ್ರದೀಪ್ ಮರಗೋಡು, ಕೂರನ ಪ್ರವೀಣ್, ಶಿವಕುಮಾರ್, ದೀಪಕ್ ಕುಮಾರ್, ನವೀನ್, ಡೇವಿಡ್, ಅಭಿ, ಕುಶಾಲನಗರದ ಭರತ್, ವಸಂತ ಆಯ್ಕೆಯಾಗಿದ್ದಾರೆ.

ಚುನಾಣಾಧಿಕಾರಿಯಾಗಿ ಮಾಜಿ ಜಿಲ್ಲಾ ಅಧ್ಯಕ್ಷ ಕೆ.ಎಸ್.ನಾಗೇಶ್, ಗುಡ್ಡೆಮನೆ ವಿಶ್ವ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ ಮಹದೇವಪ್ಪ ಮಾತನಾಡಿ, ನಮ್ಮ ಈ ಅವಧಿಯಲ್ಲಿ ಸಂಘಕ್ಕೆ ಸ್ವಂತ ಕಚೇರಿ ಮಾಡಬೇಕೆನ್ನುವ ಉದ್ದೇಶಹೊಂದಿದ್ದು, ಶಾಸಕರು, ಸಂಸದರು, ಜಿಲ್ಲಾಡಳಿತದ ಸಹಕಾರ ಬಯಸಬೇಕಾಗಿದೆ. ಸರ್ಕಾರ ಫೋಟೋಗ್ರಾಫರ್‌ಗಳನ್ನು ಅಸಂಘಟಿತ ವಲಯಕ್ಕೆ ಸೇರಿಸುವುದರಿಂದ ಜಿಲ್ಲೆಯ ಎಲ್ಲಾ ಛಾಯಾಗ್ರಾಹಕರು ಒಗ್ಗೂಡಿ ಸೌಲಭ್ಯಕ್ಕೆ ಹೋರಾಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net