

ಹರಿಹರ: ಕೇಂದ್ರ ಸರ್ಕಾರದ ಕಾರ್ವಿುಕ ನೀತಿಗಳನ್ನು ಜು.9 ರಂದು ವಿರೋಧಿಸಿ ಕಾರ್ವಿುಕರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಹಾಗೂ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.
ನಗರದ ಸಿಪಿಐ ಕಚೇರಿಯ ಕಾಂ. ಎಂ.ಸಿ. ನರಸಿಂಹನ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 139ನೇ ಕಾರ್ವಿುಕರ ಮೇ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರ ಆಳ್ವಿಕೆಯಲ್ಲಿ ಪಡೆದ ಕಾರ್ವಿುಕರ 44 ಕಾನೂನುಗಳನ್ನು ಕೇಂದ್ರ ಸರ್ಕಾರ ನಾಲ್ಕು ಕೋಡ್ಗಳನ್ನಾಗಿ ಬದಲಾಯಿಸಿ ಜಾರಿಗೆ ತರಲು ತುದಿಗಾಲಿನಲ್ಲಿ ನಿಂತಿದೆ. ಇದರಿಂದ ಕಾರ್ವಿುಕರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಕಾರ್ವಿುಕರು ಮುಷ್ಕರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು.
ನಮ್ಮ ಸಂಘಟನೆಯ ಮೂಲ ಉದ್ದೇಶ ಸಮಸಮಾಜ ನಿರ್ಮಾಣ ಮಾಡುವುದು. ಕಾರ್ವಿುಕರಲ್ಲಿ ವರ್ಗ ಜಾಗೃತಿ ಮೂಡಿಸುವುದರ ಮೂಲಕ ಸಮಾಜವಾದಿ ಸಮಾಜ ನಿರ್ವಿುಸಲು ಮುಂದಾಗಬೇಕೆಂದು ಕರೆ ನೀಡಿದರು.
ಕಾರ್ವಿುಕ ಮುಖಂಡರಾದ ನರೇಗಾ ರಂಗನಾಥ್, ವೀರಣ್ಣ ಅಂಗಡಿ, ಎಐಟಿಯುಸಿ ಮುಖಂಡರಾದ ಚಂದ್ರಪ್ಪ, ಜಾಫರ್ ಸಾದಿಕ್, ಕೃಷ್ಣಮೂರ್ತಿ ಬಿಲ್ಲವ ಮಾತನಾಡಿದರು.
ಮುಖಂಡರಾದ ಪರಮೇಶ್ವರಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ತಾಲೂಕು ಕಾರ್ಯದರ್ಶಿ ಟಿ.ಎಚ್. ನಾಗರಾಜ್, ಸುರೇಶ್ ಶೇಖರಪ್ಪ, ಪಂಪಾಪತಿ ಟ್ರಸ್ಟ್ನ ಖಜಾಂಚಿ ಜಿ. ಯಲ್ಲಪ್ಪ, ಮಹಿಳಾ ಸಂಘಟನೆ ಮುಖಂಡರಾದ ಸರೋಜಾ, ಎಐಟಿಯುಸಿ ಮುಖಂಡರಾದ ಎಚ್.ಸಿ. ಮೈದೂರು, ಬಸಪ್ಪ ರೆಡ್ಡಿ, ಗಂಗಾಧರ ಕೊಟಗಿ, ಎಂ.ಎನ್. ಪರಮೇಶ್ವರಪ್ಪ, ಶಿವರಾಜ್, ನಾರಾಯಣ ಜಾಡರ್, ಪ್ರದೀಪ್ ನಲವಾಗಲು, ಕುಮಾರ ನಾಯಕ ಹಾಗೂ ಇತರರಿದ್ದರು.