ಸಂಸ್ಥೆಯಿAದ ಗ್ರಾಹಕರಿಗೆ ಸೂರು

11sgr1
ಸಾಗರದ ಟೌನ್ ಹೌಸ್ ಬಿಲ್ಡಿಂಗ್ ಕೋ.ಆಪರೇಟಿವ್ ಸಂಸ್ಥೆ ಸರ್ವಸದಸ್ಯರ ಸಭೆಯಲ್ಲಿ ಹಿರಿಯ ವೈದ್ಯ ಡಾ.ಬಿ.ಜಿ.ಸಂಗಮ್, ಹಿರಿಯ ಸಹಕಾರಿ ಟಿ.ವಿ.ಪಾಂಡುರAಗ, ಶಾಂತಮ್ಮ ಅವರನ್ನು ಸನ್ಮಾನಿಸಲಾಯಿತು. ಸತೀಶ್, ಬಸವರಾಜ್, ಎಸ್.ಮಂಜಪ್ಪ, ಗೋಪಾಲೃಷ್ಣ ಶ್ಯಾನಭಾಗ್, ಸುಜಾತಾ, ಉಷಾ, ಉಮೇಶ್, ವೀರರಾಜ ಜೈನ್ ಇತರರಿದ್ದರು.
Published on

ಸಾಗರ : ಬಹು ವರ್ಷಗಳಿಂದ ಗ್ರಾಹಕರಿಗೆ ಸೂರು ಒದಗಿಸುವ ಕೆಲಸವನ್ನು ನಮ್ಮ ಸಂಸ್ಥೆ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದೆ ಎಂದು ಸಾಗರ ಟೌನ್ ಹೌಸ್ ಬಿಲ್ಡಿಂಗ್ ಸೊಸೈಟಿ ಅಧ್ಯಕ್ಷ ಕೆ. ಸತೀಶ್ ಹೇಳಿದರು.

ನಗರದ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಾಗರ ಟೌನ್ ಹೌಸ್ ಬಿಲ್ಡಿಂಗ್ ಕೋ. ಆಪರೇಟಿವ್ ಸಂಸ್ಥೆಯಿAದ ಹಮ್ಮಿಕೊಳ್ಳಲಾಗಿದ್ದ ಸರ್ವಸದಸ್ಯರ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಡಿಗೆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಸಂಸ್ಥೆ ಈಗ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದಿದೆ. ಸತತ 68 ವರ್ಷಗಳಿಂದ ಸಹಕಾರಿಯು ಗ್ರಾಹಕರಿಗೆ ಮನೆ ನಿರ್ಮಿಸಿಕೊಳ್ಳಲು, ನಿವೇಶನ ಖರೀದಿಸಲು, ಮನೆ ರಿಪೇರಿಗಾಗಿ ಸಾಲ ಸೌಲಭ್ಯ ನೀಡುತ್ತಿದೆ. ಕಳೆದ ಸಾಲಿನಲ್ಲಿ 13 ಲಕ್ಷ ರೂ. ನಿವ್ವಳ ಲಾಭ ಗಳಿಸಿ ಶೇ.6 ಡಿವಿಡೆಂಡ್ ಕೊಡಲಾಗಿತ್ತು. ಈ ಆರ್ಥಿಕ ಸಾಲಿನಲ್ಲಿ 19.50ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಸೇ.10 ಡಿವಿಡೆಂಡ್ ನೀಡಲಾಗುತ್ತಿದೆ ಎಂದರು.
ಸರ್ವಸದಸ್ಯರ ಸಭೆಯಲ್ಲಿ ಸಾಧಕರ ಜತೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ಉಪಾಧ್ಯಕ್ಷ ಬಸವರಾಜ್, ಎಸ್.ಮಂಜಪ್ಪ, ಗೋಪಾಲಕೃಷ್ಣ ಶ್ಯಾನಭಾಗ್, ಎಸ್.ಟಿ.ಸುಜಾತಾ, ಎನ್.ಉಷಾ, ಉಮೇಶ್ ಹಿರೇನೆಲ್ಲೂರು, ವೀರರಾಜ ಜೈನ್, ನಾಗಪ್ಪ, ಪದ್ಮನಾಭ, ಎಸ್.ಬಿ.ರಘುನಾಥ್, ಎನ್.ಪ್ರಮೋದ್, ಡಾ.ಬಿ.ಎಸ್.ಪ್ರಭಾಕರ್, ಕೆ.ಎಸ್.ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net