ನರೇಗಾ ಯೋಜನೆಯ ಲಾಭ ಪಡೆದುಕೊಳ್ಳಿ: ಹೊಸಮನಿ

PH 01
Published on

ವಾಡಿ: ನಗರ ಪ್ರದೇಶಗಳಿಗೆ ಗುಳೆ ಹೊಗುವುದನ್ನು ತಪ್ಪಿಸಲು ನರೇಗಾ ಯೋಜನೆ ರೂಪಿಸಲಾಗಿದೆ. ಸ್ಥಳೀಯರು ಉದ್ಯೋಗ ಪಡೆದುಕೊಳ್ಳುವ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಕಮರವಾಡಿ ಗ್ರಾಪಂ ಪಿಡಿಒ ಹಣಮಂತರಾಯ ಹೊಸಮನಿ ಹೇಳಿದರು.

ಕಮರವಾಡಿ ಗ್ರಾಪಂ ಆವರಣದಲ್ಲಿ ಇತ್ತೀಚಿಗೆ ನಡೆದ ಉದ್ಯೋಗ ಖಾತ್ರಿ ಯೋಜನೆಯ ಗ್ರಾಮ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಎನ್ನುವುದು ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾಗಿದ್ದು ಸಾರ್ವಜನಿಕರು ತಮ್ಮ ವೈಯಕ್ತಿಕ ಕೆಲಸ ಮಾಡಿಕೊಳ್ಳುವುದರ ಮೂಲಕ ಆರ್ಥಿಕ ಭದ್ರತೆ ಸ್ಥಿರ ಮಾಡಿಕೊಳ್ಳಬಹುದು. ಕೆರೆ ಕಟ್ಟೆಗಳ ನಿರ್ಮಾಣ ಕೆರೆ ಹೂಳೆತ್ತುವುದು ಸಿಸಿ ರಸ್ತೆಗಳ ನಿರ್ಮಾಣ ದಂತಹ ಸಾಮೂಹಿಕ ಕೆಲಸಗಳು ಹಾಗೂ ರೈತರು ತಮ್ಮ ಹೊಲಗಳಲ್ಲಿ ಬದು ನಿರ್ಮಾಣ ಜಮೀನಿನ ಅರಣೀಕರಣ ಗಿಡಗಳ ನೆಡುವುದು ಹೀಗೆ ಹತ್ತು ಹಲವು ಕೆಲಸಗಳು ಮಾಡಿಕೊಳ್ಳಬಹುದು. ಸಾರ್ವಜನಿಕರು ತಮಗೆ ಅಗತ್ಯವಾದ ಕೆಲಸಗಳ ಪಟ್ಟಿಯನ್ನು ನೀಡದರೆ ಅದಕ್ಕೆ ತಕ್ಕದಾಗಿ ಕ್ರಿಯೆ ಯೋಜನೆ ರೂಪಿಸಿ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಅನಿತಾ ಹರಿಸಿಂಗ್ ಚವ್ಹಾಣ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮು ಗಡ್ಡಿಮನಿ, ಕಾರ್ಯದರ್ಶಿ ಬಸವರಾಜ ಗಂಜಿ, ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಸಹಾಯಕ ರವಿ ಗುತ್ತೇದಾರ, ತೆರಿಗೆ ವಸೂಲಿಗಾರ ಶಿವಪುತ್ರಪ್ಪ ಹೊಟ್ಟಿ, ಕಂಪ್ಯೂಟರ್ ಆಪರೇಟರ್ ವಿಜಯಕುಮಾರ ಕಾಶಿ, ಮುಖಂಡರಾದ ಹರಿಸಿಂಗ್ ಚವ್ಹಾಣ, ಮಾರ್ತಂಡಪ್ಪ ಆಲೂರ, ಚನ್ನಪ್ಪ ಪೂಜಾರಿ ಸೇರಿದಂತೆ ಗ್ರಾಪಂ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net