ಬುಲೆರೋ ವಾಹನಕ್ಕೆ ಆಟೋರಿಕ್ಷಾ ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ

raichur
raichur
Published on

ರಾಯಚೂರು ರಾಯರ ದರ್ಶನ ಪಡೆದು ಆಟೋದಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳುವ ವೇಳೆಯಲ್ಲಿ ಬುಲೆರೋ ವಾಹನಕ್ಕೆ ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂತ್ರಾಲಯದ ಚೆಟ್ನಿಹಳ್ಳ ಗ್ರಾಮದ ಬಳಿ ಬುಧವಾರ ನಡೆದಿದೆ.

ಮಂತ್ರಾಲಯಕ್ಕೆ ಬಂದಿದ್ದ ಚಿಕ್ಕಬಳ್ಳಾಪುರದ ರಾಮನಹಳ್ಳಿ ನಿವಾಸಿಗಳಾದ ವೇಣುಗೋಪಾಲ್, ರಾಧಾ, ಶಾಲಿನಿ, ಸಹದೇವ ಗಾಯಗೊಂಡಿದ್ದಾರೆ. ವೇಣುಗೋಪಾಲ್ನ ಎಡಗೈನ ಮೂರು ಬೆರಳುಗಳು ಕಟ್ ಆಗಿವೆ. ಗಾಯಾಳುಗಳನ್ನು ಎಮ್ಮಿಗನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರಪ್ರದೇಶದ ಮಾಧವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net