ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನ ಅಗತ್ಯ

ನಗರದ ಭಾರತೀಯ ಭಾಷಾ ಸಂಸ್ಥಾನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಸ್ತ್ರೀಯ ಕನ್ನಡ ಭಾಷಾ ಮಾನ್ಯತಾ ದಿನ ಕಾರ್ಯಕ್ರಮವನ್ನು ಶಾಸನ ತಜ್ಞ ಡಾ.ಸೀತಾರಾಮ ಜಾಗೀರದಾರ ಉದ್ಘಾಟಿಸಿದರು. ಪ್ರೊ.ಬಸವರಾಜ ಕೋಡಗುಂಟಿ, ಡಾ.ಎಲ್.ಆರ್. ಪ್ರೇಮ್‌ಕುಮಾರ್, ಪ್ರೊ.ಕೆ. ರವೀಂದ್ರನಾಥ ಇದ್ದರು.

Published on: 

ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನ ದೊರೆಯಬೇಕು ಶಾಸನ ತಜ್ಞ ಡಾ.ಸೀತಾರಾಮ ಜಾಗೀರದಾರ ಹೇಳಿದರು.

ನಗರದ ಭಾರತೀಯ ಭಾಷಾ ಸಂಸ್ಥಾನ ಸಭಾಂಗಣದಲ್ಲಿ ಶುಕ್ರವಾರ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಆಯೋಜಿಸಿದ್ದ ಶಾಸ್ತ್ರೀಯ ಕನ್ನಡ ಭಾಷಾ ಮಾನ್ಯತಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಚರಿತ್ರೆ ಇದೆ. ಇಂತಹ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸ್ವಾತಂತ್ರವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಯಾವುದೇ ಕಾವ್ಯ ಸಮಕಾಲೀನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕಾವ್ಯದಲ್ಲಿ ಕವಿಗಳು ಸಮಕಾಲೀನ ವಿಷಯಗಳನ್ನು ಉಲ್ಲೇಖಿಸಿ ರುತ್ತಾರೆ. ಕೆಲವೊಮ್ಮೆ ಗೊತ್ತಿಲ್ಲದೆಯೂ ಉಲ್ಲೇಖವಾಗಿರುತ್ತದೆ. ಹಾಗಾಗಿ ಪ್ರಾಚೀನ ಕಾವ್ಯಗಳನ್ನು ಅಧ್ಯಯನ ನಡೆಸಿದರೆ ಆ ಕಾಲದ ಸ್ಥಿತಿಗತಿಯ ಕುರಿತು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ಭಾಷಾ ಸಂಸ್ಥಾನ ನಿರ್ದೇಶಕ ಪ್ರೊ.ಬಸವರಾಜ ಕೋಡಗುಂಟಿ, ಶಾಸ್ತ್ರೀಯ ಭಾಷೆಗಳ ಸಂಯೋಜನಾಧಿಕಾರಿ ಡಾ.ಎಲ್.ಆರ್. ಪ್ರೇಮ್‌ಕುಮಾರ್, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ನಿರ್ದೇಶಕ ಪ್ರೊ.ಕೆ. ರವೀಂದ್ರನಾಥ ಇದ್ದರು.