

ಬೇಲೂರು: ತಾಲೂಕಿನ ಕುಶಾವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಿಗನೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನವು ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಲೋಕಾರ್ಪಣೆಯಾಯಿತು.
ಮಲ್ಲಿಗನೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ 850 ವರ್ಷಗಳ ಇತಿಹಾಸವಿದ್ದು, ಭಕ್ತರ ಬೇಡಿದ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಸವೇಶ್ವರ ಎಂದು ಅಂದಿನಿಂದ ಇಂದಿನವರೆಗೂ ಸುತ್ತಮುತ್ತಲಿನ ಗ್ರಾಮಸ್ಥರು ಪೂಜಿಸಿಕೊಂಡು ಬರುತ್ತಿದ್ದಾರೆ. ಆದರೆ ಈ ದೇವಾಲಯವು ಹಳೆಯದಾಗಿ ಶಿಥಿಲಾವಸ್ಥೆ ತಲುಪಿದ್ದರಿಂದ ಗ್ರಾಮಸ್ಥರು ಹಾಗೂ ಭಕ್ತರು ಸೇರಿ ಶ್ರೀ ಬಸವೇಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ದೇವಾಲಯ ಲೋಕಾರ್ಪಣೆ ಮಾಡಲಾಯಿತು.
ದೇವಾಲಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ದೇವರಿಗೆ ಅಭಿಷೇಕ, ಪುಷ್ಪಾರ್ಚನೆ, ಹಣ್ಣಿನ ನೈವೇಧ್ಯ, ಕಲಶಾರೋಹಣ ನೆರವೇರಿಸಿ, ಹೋಮ ಹವನಗಳ ಮೂಲಕ ದೇವರಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಶಾಸಕ ಎಚ್.ಕೆ.ಸುರೇಶ್, ತಹಸೀಲ್ದಾರ್ ಎಂ.ಮಮತಾ, ಮಲ್ಲಿಕಾ, ಕುಮಾರ್ ಮಲ್ಲಿಗನೂರು, ಮೊಗಸಾವರ. ಕುಶಾವರ. ಕೌರಿ, ಈಚಲಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.