

ಯಳಂದೂರು: ಅಂಬಳೆ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ಶಾಂತಮ್ಮ ಮಂಗಳವಾರ ಆಯ್ಕೆಯಾದರು.
ಒಟ್ಟು 16 ಸದಸ್ಯರಿರುವ ಈ ಪಂಚಾಯಿತಿಗೆ ಅಧ್ಯಕ್ಷರಾಗಿದ್ದ ಸಿ. ನಂಜುಂಡಸ್ವಾಮಿ ಅವರು ಫೆ. 27 ರಂದು ಉಪವಿಭಾಗಾಧಿಕಾರಿಗಳಿಗೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಮಹದೇವಮ್ಮ ಅವರನ್ನು ಮಂಗಳವಾರ ಪ್ರಭಾರ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಿಡಿಒ ಸಿ.ಎನ್. ಕಾವ್ಯಾ ಸದಸ್ಯರಾದ ಸಿ. ನಂಜುಂಡಸ್ವಾಮಿ, ಸಿದ್ದನಾಯಕ, ರಾಜಣ್ಣ, ಕಾರ್ಯದರ್ಶಿ ಎಚ್. ಪುಟ್ಟರಾಜು, ಹಾಲಿನ ಮಹದೇವಶೆಟ್ಟಿ ಇತರರು ಇದ್ದರು.