ವಲಯ-1 ಆಟೋಗಳಿಗೆ ನಿಲ್ದಾಣಗಳಿಗೆ ಮುಕ್ತ ಪ್ರವೇಶಕ್ಕೆ ಆಗ್ರಹ

udp-17-auto
Published on

ಉಡುಪಿ: ನಗರಸಭಾ ವ್ಯಾಪ್ತಿಯ ಎಲ್ಲಾ ಆಟೋ ನಿಲ್ದಾಣಗಳಲ್ಲಿ ವಲಯ-1ರ ಅನುಮತಿ ಪಡೆದಿರುವ ಎಲ್ಲಾ ಆಟೋಗಳಿಗೆ ಮುಕ್ತ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು. ಸ್ಟಾೃಟ್ ಲೀಡರ್‌ಗಳ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ನಗರಸಭೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘಟನೆ ಅಧ್ಯಕ್ಷ ಜಯಂತ್ ಸುವರ್ಣ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಆರ್‌ಟಿಒ ಪರವಾನಿಗೆ ನೀಡುವ ಸಂದರ್ಭದಲ್ಲಿ ಆಟೋ ರಿಕ್ಷಾಗಳಿಗೆ ನಿಗದಿತ ಪ್ರದೇಶದಲ್ಲಿ ನಿಲುಗಡೆ ಮಾಡಲು ಯಾವುದೇ ಶರತ್ತು ವಿಧಿಸಿಲ್ಲ. ಆದರೆ ಕೆಲವು ಆಟೋ ಸ್ಟಾೃಂಡ್‌ಗಳಲ್ಲಿ ತಮ್ಮ ಸದಸ್ಯರಿಗೆ ಮಾತ್ರ ಬಾಡಿಗೆ ನಿರ್ವಹಿಸಲು ಅವಕಾಶ ನೀಡುತ್ತಿದ್ದು, ಬೇರೆಯವರು ಬಂದು ನಿಂತರೆ ಜಗಳಕ್ಕೆ ಬರುತ್ತಿದ್ದಾರೆ. ಇದರಿಂದ ನಗರದಾದ್ಯಂತ ಸುಮಾರು 380 ಆಟೋ ರಿಕ್ಷಾಗಳಿಗೆ ತೊಂದರೆಯಾಗಿದೆ. ರಿಕ್ಷಾ ನಿಲ್ದಾಣಗಳಿಗೆ ನಗರಸಭೆ ಜಾಗ ಗುರುತು ಮಾಡಿಕೊಡುತ್ತಿದ್ದು, ವಲಯ-1 ಅನುಮತಿ ಹೊಂದಿರುವವರು 7 ಕಿಮೀ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಬಾಡಿಗೆ ನಿರ್ವಹಿಸಬಹುದು. ಆದರೆ ಸ್ಟಾೃಂಡ್ ಲೀಡರ್‌ಗಳು ಜಾಗವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. 10 ದಿನದೊಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ ನಡೆಸಲಾಗುವುದು. ಮತದಾನ ಬಹಿಷ್ಕಾರಕ್ಕೆ ಮುಂದಾಗುವುದಾಗಿ ತಿಳಿಸಿದರು.
ಸದಸ್ಯರಾದ ದಿವಾಕರ ಪೂಜಾರಿ, ವಿಠಲ ಜತ್ತನ್ನ, ರಾಜೇಶ್ ಸುವರ್ಣ, ಶಿವರಾಮ ಶೆಟ್ಟಿಗಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net