ಆಟೋ ಬಿಡಿ ಭಾಗಗಳ ಅಂಗಡಿ ಕಳ್ಳತನ

9-pnp 1
Published on

ಪಾಂಡವಪುರ: ದ್ವಿಚಕ್ರ ವಾಹನ ಬಿಡಿಭಾಗಗಳ ಅಂಗಡಿಯ ಛಾವಣಿಯ ಕಲ್ನಾರ್‌ಶೀಟನ್ನು ಒಡೆದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಬಿಡಿ ಭಾಗಗಳನ್ನು ಕಳವು ಮಾಡಿದ್ದಾರೆ.

ಚಿನಕುರಳಿ ಗ್ರಾಮದ ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿರುವ ಎಚ್‌ಎಸ್‌ಎಂಜಿ ಆಟೋ ಪಾರ್ಟ್ಸ್ ಅಂಗಡಿಯಲ್ಲಿ ಬುಧವಾರ ತಡರಾತ್ರಿ ಘಟನೆ ನಡೆದಿದ್ದು, ವಿವಿಧ ದ್ವಿಚಕ್ರ ವಾಹನಗಳ ಸುಮಾರು 30 ಹೊಸ ಟೈರ್‌ಗಳು, ಟ್ಯೂಬ್‌ಗಳು, 20 ಹೊಸ ಬ್ಯಾಟರಿಗಳು, 1 ಲೀಟರ್‌ನಿಂದ ಹಿಡಿದು 7.5 ಲೀಟರ್‌ವರೆಗಿನ ಇಂಜಿನ್ ಆಯಿಲ್ ಕ್ಯಾನ್‌ಗಳು, ಚೈನ್‌ಗಳು, ಗ್ರೀಸ್ ಡಬ್ಬಗಳು, ಸೀಟ್ ಕವರ್, ಪೆಟ್ರೋಲ್ ಟ್ಯಾಂಕ್ ಕವರ್, ಪ್ಲಗ್‌ಗಳು ಸೇರಿ ಹಲವು ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಅಂಗಡಿ ಮಾಲಿಕ ಮಹಮ್ಮದ್ ಅನ್ಸರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

3 ತಿಂಗಳ ಲಾಕ್‌ಡೌನ್‌ನಿಂದ ಅಂಗಡಿಯಲ್ಲಿ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದೆ. ಈಗ ಬ್ಯಾಂಕ್ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಮಾಡಿ ಹಾಕಿದ್ದ ಬಂಡವಾಳವು ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net