

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘ ಮತ್ತು ಧಾರವಾಡ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದಿ0ದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿಯಾತ್ರೆ ಎಂಬ ಖಾಸಗಿ ಸಂಸ್ಥೆಗೆ ಅನುಮತಿ ನೀಡಬಾರದು. ಅವಳಿನಗರದಲ್ಲಿ ಆಟೋ ರಿಕ್ಷಾ ನಿಲ್ದಾಣಗಳನ್ನು ಸ್ಥಾಪಿಸಬೇಕು. ನಗರದ ಸಿಸಿ ರಸ್ತೆಗಳಲ್ಲಿ ಹಾಕಲಾಗಿರುವ ಎತ್ತರದ ರೋಡ್ ಹಂಪ್‌ಗಳನ್ನು ತೆರವುಗೊಳಿಸಬೇಕು. ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕು. ಆಟೋ ರಿಕ್ಷಾ ಚಾಲಕರಿಗೆ ಆಟೋ ಕಾಲನಿ ನಿರ್ಮಿಸಬೇಕು ಎಂದು ಜಿಲ್ಲಾಽಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.
ಜೀವನ ಹುತ್ಕರಿ, ವಿ.ಬಿ. ಸಂಜೀವಪ್ಪನವರ, ಲಕ್ಷ÷್ಮಣ ಜಮನಾಳ, ಗೌಸ್ ಕಿತ್ತೂರ, ಸುರೇಶ ರಾಠೋಡ, ಬಸವರಾಜ ಕೊಳಣ್ಣವರ, ಪ್ರಕಾಶ ಗಡಾದ, ರಾಜೇಶ, ಸಾಯಿರಾಮ ಕಾಳೆ, ರಾಘವೇಂದ್ರ ಬಡಿಗೇರ, ಉಡಚಪ್ಪ ಬಿ., ಸುಲೇಮನ ಬಿಜಾಪೂರ, ವಾಸೀಮ ಗಂಜಿಗಟ್ಟಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.