

ನಾಪೋಕ್ಲು: ಸಮೀಪದ ಬಲಮಾವಟಿ ಗ್ರಾಮದ ಅಪೋಲೊ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಾಡಹಬ್ಬ ಕೈ ಮುಹೂರ್ತ ಪ್ರಯುಕ್ತ ಆಟೋಟ ಕೂಟವನ್ನು ಆ.27ರಂದು ಆಯೋಜಿಸಲಾಗಿದೆ.
ನೇತಾಜಿ ಪ್ರೌಢಶಾಲೆ ಆಟದ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮುಕ್ಕಾಟಿರ ಕೆ. ಸುತನ್ ಸುಬ್ಬಯ್ಯ, ಶಿಕ್ಷಕಿ ಮೂವೆರ ಕಾವೇರಮ್ಮ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಅಪ್ಪಚೆಟ್ಟೋಳಂಡ ಬಿ. ಹರ್ಷಿತ್ ಅಯ್ಯಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ