ಆಟೋ ಪಲ್ಟಿಯಾಗಿ ಹಣ್ಣುಗಳು ಚೆಲ್ಲಾಪಿಲ್ಲಿ

ಕನಕಗಿರಿಯ ಮುದಗಲ್-ಗಂಗಾವತಿ ರಾಜ್ಯ ಹೆದ್ದಾರಿಯ ಎಪಿಎಂಸಿ ಗೇಟ್ ಬಳಿ ಆಟೋ ಪಲ್ಟಿಯಾಗಿ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿರುವುದು.
ಕನಕಗಿರಿಯ ಮುದಗಲ್-ಗಂಗಾವತಿ ರಾಜ್ಯ ಹೆದ್ದಾರಿಯ ಎಪಿಎಂಸಿ ಗೇಟ್ ಬಳಿ ಆಟೋ ಪಲ್ಟಿಯಾಗಿ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿರುವುದು.
Published on

ಕನಕಗಿರಿ: ಪಟ್ಟಣದ ಮುದಗಲ್-ಗಂಗಾವತಿ ರಾಜ್ಯ ಹೆದ್ದಾರಿಯ ಎಪಿಎಂಸಿ ಗೇಟ್ ಬಳಿ ತಿರುವಿನಲ್ಲಿ ಸರಕು ಸಾಗಣೆ ಆಟೋ ಪಲ್ಟಿಯಾಗಿ ವಾಹನದಲ್ಲಿದ್ದ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿರುವ ಘಟನೆ ಶನಿವಾರ ನಡೆದಿದೆ. ದಾಳಿಂಬೆ, ಸೇಬು ಇತರ ಹಣ್ಣುಗಳ ಬಾಕ್ಸ್ ತುಂಬಿಕೊಂಡು ತಾವರಗೇರಾದಿಂದ ಕನಕಗಿರಿ ಕಡೆ ಬರುತ್ತಿದ್ದ ಆಟೋ ಚಾಲಕ ರಸ್ತೆಯ ಅವೈಜ್ಞಾನಿಕ ಹಂಪ್ಸ್ ಕಂಡು ಏಕಾಏಕಿ ಬ್ರೇಕ್ ಹಾಕಿದ್ದು, ಆಟೋ ಪಲ್ಟಿಯಾಗಿದೆ. ಸ್ಥಳೀಯರು ರಸ್ತೆಯಲ್ಲಿ ಬಿದ್ದಿದ್ದ ಹಣ್ಣುಗಳನ್ನು ಆಯ್ದು ಬುಟ್ಟಿಗಳಿಗೆ ತುಂಬಿ ವ್ಯಾಪಾರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ವಾಹನದಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net