ಧ್ವಜಸ್ತಂಭ ಕಿತ್ತೊಗೆದಿದ್ದಕ್ಕೆ ಆಟೋ ಚಾಲಕರ ಪ್ರತಿಭಟನೆ

New Auto sttrike new
Published on

ಹುಬ್ಬಳ್ಳಿ : ಇಲ್ಲಿನ ಹಳೇ ಬಸ್​ ನಿಲ್ದಾಣ ಬಳಿ ಆಟೋರಿಾ ನಿಲ್ದಾಣದಲ್ಲಿ ಹಾರಿಸಲಾಗಿದ್ದ ಕನ್ನಡದ ಬಾವುಟವನ್ನುಧ್ವಜಸ್ತಂಭದ ಸಮೇತ ಕಿತ್ತುಹಾಕಿದ ಸಾರಿಗೆ ಸಂಸ್ಥೆ ಸಿಬ್ಬಂದಿ ವಿರುದ್ಧ ಆಟೋ ಚಾಲಕರು ಶನಿವಾರ ಮಧ್ಯಾಹ್ನ ಧಿಡೀರ್​ ಪ್ರತಿಭಟನೆ ನಡೆಸಿದರು.

ಕನ್ನಡಬಾವುಟ ಹಾರಿಸಿದ್ದ ಧ್ವಜಸ್ತಂಭ ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯಿಂದ ಅಡ್ಡಿಪಡಿಸಿರಲಿಲ್ಲ. ಆದರೂ, ಸಾರಿಗೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ಬಾವುಟವನ್ನುಧ್ವಜಸ್ತಂಭ ಸಮೇತ ಕಿತ್ತೊಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನಾಲ್ಕೆ$ದು ದಿನಗಳಲ್ಲಿ ಧ್ವಜಸ್ತಂಭವನ್ನು ಮೊದಲಿನಂತೆ ನಿಲ್ಲಿಸುವ ಮೂಲಕ ಕನ್ನಡ ಬಾವುಟ ಹಾರಿಸಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನ್ನಡ ಜಲ, ನೆಲ, ಭಾಷೆಯ ಬಗ್ಗೆ ಅಭಿಮಾನ ಇರಬೇಕಾದ ಅಧಿಕಾರಿಗಳು ಈ ರೀತಿ ಅಪಮಾನ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶೇಖರಯ್ಯ ಮಠಪತಿ, ರಾಜೇಶ ಬಿಜವಾಡ, ಮಾರುತಿ ಅಂಚಟಗೇರಿ, ಮಲ್ಲಿಕಾರ್ಜುನ ನಂದ್ಯಾಳ, ಮಹಾವೀರ ಬಿಲಾನಾ, ಮುರುಳಿ ಇಂಗಳಳ್ಳಿ, ಮಂಜುನಾಥ ಯರಗಂಬಳಿಮಠ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net