ಹದಗೆಟ್ಟ ರಸ್ತೆಗಳ ವಿರುದ್ಧ ದಿಢೀರ್​ ಪ್ರತಿಭಟನೆ: ನಗರಸಭೆ ಆಯುಕ್ತ ಹಾಗೂ ಅಧ್ಯಕ್ಷರಿಗೆ ಅರ್ಧ ಕಿ.ಮೀ.ವರೆಗೂ ನಡೆಸಿದ ಆಟೋ ಚಾಲಕರು!

Raod gadaga
Published on

ಗದಗ: ರಸ್ತೆ ಹದಗೆಟ್ಟು ಹಲವು ತಿಂಗಳುಗಳಾದರೂ ಸರಿಪಡಿಸದ ನಗರಸಭೆ ವಿರುದ್ಧ ರೊಚ್ಚಿಗೆದ್ದ ಆಟೋಚಾಲಕರು ಗುರುವಾರ ದಿಢೀರ್​ ಪ್ರತಿಭಟನೆ ನಡೆಸಿದರು.

ಹಳೇ ಡಿಸಿ ಕಚೇರಿ ಸರ್ಕಲ್ ನಿಂದ ಹೊಸ ಬಸ್ ನಿಲ್ದಾಣದವರಗೆ ಹದಗೆಟ್ಟ ಹಲವು ತಿಂಗಳೆ ಕಳೆದಿವೆ. ಕಣ್ಣುಮುಚ್ಚಿ ಕುಳಿತಿರುವ ಅಧಿಕಾರಿಗಳ ವಿರುದ್ಧವೂ ಆಕ್ರೋಶ ಹೊರಹಾಕಿದರು.

ಗದಗ ನಗರದ ಹಳೇ ಡಿಸಿ ಕಚೇರಿ ಸರ್ಕಲ್ ನಲ್ಲಿ ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರತಿದಿನ ಟ್ರಾಫಿಕ್ ಜಾಮ್ ಸವಾರರು‌ ಪರದಾಡುವಂತಾಗಿದ್ದು, ಸಂಚಾರ ನಿಯಂತ್ರಣಕ್ಕೆ ಪೊಲೀಸರ ಹರಸಹಾಸ ಪಡಬೇಕಿದೆ.

ಪ್ರತಿಭಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ನಗರಸಭೆ ಆಯುಕ್ತ ರಮೇಶ್ ಸುಣಗಾರ, ಅಧ್ಯಕ್ಷೆ ಉಷಾ ಅವರಿಗೆ ಉರಿ ಬಿಸಿಲಿನಲ್ಲೇ ಅರ್ಧ ಕಿಲೋಮೀಟರ್ ನಡೆಸಿ ಸತ್ಯ ದರ್ಶನ ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net