ಮೈಸೂರಿನಲ್ಲಿ ಆಟೋ ಚಾಲಕರಿಂದ ರಾಜ್ಯೋತ್ಸವ

39
Published on

ಮೈಸೂರು: ಜೆ.ಪಿ.ನಗರದ ಶ್ರೀಚಾಮುಂಡೇಶ್ವರಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಂದ ಶುಕ್ರವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಕರ್ನಾಟಕಕ್ಕೆ ಬಂದವರನ್ನು ಸತ್ಕರಿಸಿ ಬದುಕು ಕಲ್ಪಿಸಿಕೊಡುವ ನಾಡು ನಮ್ಮದು. ಆದರೆ ಹೊರಗಿನಿಂದ ಬಂದವರು ಸಹ ಕನ್ನಡವನ್ನು ಕಲಿಯಬೇಕೇ ಹೊರತು ಕನ್ನಡಿಗರ ಮೇಲೆ ಬೇರೆ ಭಾಷೆ ಏರುವುದು ಸರಿಯಲ್ಲ. ಈಗಾಗಲೇ ಕೇಂದ್ರ ಸರ್ಕಾರದ ಹಲವು ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಕ್ರಮ. ಆದರೆ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಭೈರಪ್ಪ, ಮುಖಂಡರಾದ ಈಶ್ವರ್, ಜಗದೀಶ್ (ಜಗನ್ನಾಥ್ ಭೋವಿ), ಮಹೇಂದ್ರಗೌಡ, ಸಂಘದ ಅಧ್ಯಕ್ಷರಾದ ಸಿದ್ದರಾಜು, ಗೌರವಾಧ್ಯಕ್ಷ ಎಂ.ಪಿ.ಚಂದ್ರಶೇಖರ್, ಉಪಾಧ್ಯಕ್ಷ ಮಹದೇವಸ್ವಾಮಿ, ಸದಸ್ಯರಾದ ಶಂಭುಲಿಂಗ ಸ್ವಾಮಿ, ಮಹೇಶ್, ಮಂಜುನಾಥರಾವ್, ಮಲ್ಲೇಶ್, ಜಗದೀಶ್, ಸುರೇಶ್, ಮಂಜು, ರವಿ.ಕೆ, ನಿಂಗರಾಜು, ಸ್ವಾಮಿ, ಎಂ.ರವಿ, ಬಸವ, ನಾಗ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net