

ಮೈಸೂರು: ನಾಡಿನಲ್ಲಿ ಕನ್ನಡತನ, ಮಾತೃ ಹೃದಯವಂತಿಕೆಯನ್ನು ಈಗಲೂ ಉಳಿಸಿಕೊಂಡು ಬರುತ್ತಿರುವುದು ಆಟೋ ಚಾಲಕರು ಎಂದು ನಟ ಧ್ರುವ ಸರ್ಜಾ ಬಣ್ಣಿಸಿದರು.
ಕೆ.ಆರ್.ಎಸ್ ರಸ್ತೆಯ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್‌ನಿಂದ ಮಂಗಳವಾರ ಆಯೋಜಿಸಿದ್ದ ಚಾಲಕರ ಸಮ್ಮೇಳನ, ಯೂನಿಯನ್ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು.
ಶ್ರಮಜೀವಿಗಳಾದ ಆಟೋ ಚಾಲಕರು, ವಾತೃ ಹೃದಂು ಉಳ್ಳವರು. ಕನ್ನಡ, ಕನ್ನಡತನವನ್ನು ಸದಾ ಉಳಿಕೊಂಡು ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಷ್ಟಪಟ್ಟು ಸಂಪಾದನೆ ವಾಡುವುದಲ್ಲದೆ, ತಮ್ಮ ಕಷ್ಟವನ್ನು ಮರೆತು ಮಾನವೀಯತೆಯಿಂದ ರೋಗಿಗಳು, ವೃದ್ಧರಿಗೆ, ನಿರ್ಗತಿಕರಿಗೆ, ಗರ್ಭಿಣಿಂುರು, ಮಹಿಳೆಂುರಿಗೆ ಉಚಿತ ಸೇವೆ ಒದಗಿಸುವುದರ ಮೂಲಕ ನಿಸ್ವಾರ್ಥ ಸೇವೆ ವಾಡುತ್ತಿದ್ದಾರೆ. ಇಂತಹ ಮನಸ್ಥಿತಿ ಎಲ್ಲರಲ್ಲೂ ಬರಬೇಕು ಎಂದರು.
ಕನ್ನಡ ಚಿತ್ರಗಳನ್ನು ಮೊದಲು ನೋಡುವುದೇ ಆಟೋ ಚಾಲಕರು. ಇಂದು ಕನ್ನಡ ಚಿತ್ರಗಳು ಂುಶಸ್ವಿಂಾಗಲು ಆಟೋ ಚಾಲಕರೇ ಪ್ರಮುಖ ಕಾರಣ. ನಮ್ಮ ತಂದೆಂುೂ ಆಟೋ ಚಾಲಕರಾಗಿದ್ದರು. ಇದರಿಂದ ಆಟೋ ಚಾಲಕರು ಎಂದರೆ ನನಗೂ ನಮ್ಮ ತಂದೆಗೂ ಅಪಾರವಾದ ಗೌರವ ಎಂದು ಹೇಳಿದರು.
ಚಾಲಕರಿಗೆ ಸಮವಸ್ತ್ರ ವಿತರಣೆ, ಮಕ್ಕಳಿಗೆ ಬ್ಯಾಗ್, ಪುಸ್ತಕ ಸಾಮಗ್ರಿ ವಿತರಣೆ, ವಿವಿಧ ಗಣ್ಯರ ಅಭಿನಂದನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಚಾರ ನಿಯಮ ಕುರಿತು ಮಾಹಿತಿ ನೀಡಲಾಯಿತು.
ಸಂಘಟನೆಂು ಅಧ್ಯಕ್ಷ ಸಂತೋಷ್ ಕುವಾರ್ ಪ್ರಾಸ್ತಾವಿಕವಾಗಿ ವಾತನಾಡಿದರು.
ಚಲನಚಿತ್ರ ನಿರ್ವಾಪಕ ಉವಾಪತಿ ಶ್ರೀನಿವಾಸಗೌಡ, ಸಂಘಟನೆ ರಾಜ್ಯಾಧ್ಯಕ್ಷ ಸಂತೋಷ್‌ಕುಮಾರ್, ವಿವಿ ಪುರಂ ಸಂಚಾರ ಪೊಲೀಸ್ ಠಾಣೆಂು ಇನ್‌ಸ್ಪೆಕ್ಟರ್ ಲವ, ಂುೂನಿಂುನ್ ಗೌರವಾಧ್ಯಕ್ಷ ಗಂಡಸಿ ಸದಾನಂದಸ್ವಾಮಿ, ವಾರ್ಗದರ್ಶಕರಾದ ಗೋಪಾಲಣ್ಣ, ಆರ್.ಯಶೋದಾ, ಪ್ರಧಾನ ಕಾಂರ್ುದರ್ಶಿ ರಾಜು ಕನ್ನಡಿಗ, ಮೈಸೂರು ಜಿಲ್ಲಾ ಅಧ್ಯಕ್ಷ ಎನ್.ಸೋಮಶೇಖರ್, ಪ್ರಧಾನ ಕಾಂರ್ುದರ್ಶಿ ಎಸ್.ರವಿ, ಗೌರವಾಧ್ಯಕ್ಷ ಕೆ.ವಿ.ಚೇತನ್, ಪದಾಧಿಕಾರಿಗಳಾದ ಟಿ.ಮಧು, ಲೋಕೇಶ್ ರೆಡ್ಡಿ, ಎಚ್.ಎನ್.ಮಿಥುನ್, ಡಾ.ಡಿ.ಪಿ.ರವಿಚಂದ್ರ, ರಘು ಂಾದವ್, ರಮೇಶ್, ವಡಿವೇಲ್, ಸೌಮ್ಯ, ಮುರುಗನ್, ದಿನೇಶ್ ಸಿಂಗ್ ಇತರರು ಇದ್ದರು.