ಗದಗಿನಲ್ಲಿ ಆಟೋ ಚಾಲಕರ, ಮಾಲೀಕರ ಸಮಾವೇಶ 28ರಂದು

auto
Published on

ಹುಬ್ಬಳ್ಳಿ: ಗದಗ ಜಿಲ್ಲಾ ವಿವಿಧ ಆಟೋ ಚಾಲಕರ ಹಾಗೂ ಮಾಲೀಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಗದಗಿನ ಡಾ. ಅಂಬೇಡ್ಕರ್ ಸಭಾ ಭವನದಲ್ಲಿ ಜ. 28ರಂದು ಬೆಳಗ್ಗೆ 10ಕ್ಕೆ ರಾಜ್ಯಮಟ್ಟದ ಆಟೋ ಚಾಲಕರ ಹಾಗೂ ಮಾಲೀಕರ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗನ ಶ್ರೀ ತೋಂಟದಾರ್ಯ ಮಠದಿಂದ ರಾಜ್ಯ ಮಟ್ಟದ ಆಟೋ ಚಾಲಕರ ಸಮಾವೇಶದ ಬೃಹತ್ ಮೆರವಣಿಗೆ ನಡೆಯಲಿದೆ ಎಂದರು.

ಆಟೋ ಚಾಲಕರನ್ನು ಕಾರ್ವಿುಕರೆಂದು ಪರಿಗಣಿಸಬೇಕು. ಆಟೋ ಚಾಲಕರ ಮಾಲೀಕರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು. ಆಟೋ ಚಾಲಕರಿಗೆ ನಿವೇಶನ/ವಸತಿ ಅಥವಾ ಆಟೋ ಕಾಲನಿ ನಿರ್ವಣ, ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು, ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ ಒದಗಿಸುವುದು, ರಾಜ್ಯದ ಬಸ್ ನಿಲ್ದಾಣಗಳಲ್ಲಿ ಆಟೋ ನಿಲ್ದಾಣ ನಿರ್ವಿುಸುವುದು, ತೆರಿಗೆ ವಿನಾಯಿತಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಹಕ್ಕೊತ್ತಾಯ ಮಂಡಿಸಲಾಗುವುದು. ಬೇಡಿಕೆ ಈಡೇರಿಸದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಧ್ಯಾಹ್ನ 1.30ಕ್ಕೆ ಏರ್ಪಡಿಸಿರುವ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವ ಎಚ್.ಕೆ. ಪಾಟೀಲ, ಶಾಸಕರಾದ ಜಿ.ಎಸ್. ಪಾಟೀಲ, ಚಂದ್ರು ಲಮಾಣಿ, ಸಿ.ಸಿ. ಪಾಟೀಲ, ಎಂಎಲ್​ಸಿಗಳಾದ ಪ್ರೊ.ಎಸ್.ವಿ. ಸಂಕನೂರ, ಸಲೀಂ ಅಹಮದ್, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಇತರರು ಆಗಮಿಸುವರು ಎಂದರು.

ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಬಾಬಾಜಾನ ಬಳಗಾನೂರ, ವಿಶ್ವನಾಥಗೌಡ, ಮುರಳಿ ಇಂಗಳಹಳ್ಳಿ, ವಿಜಯ ಕಲ್ಮನಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net