

ವಿರಾಜಪೇಟೆ: ನಗರದ ಜೈ ಭಾರತ್ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ 2025-26 ನೇ ಸಾಲಿನ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಶಿವು, ಪ್ರಧಾನ ಕಾರ್ಯದರ್ಶಿಯಾಗಿ ಬಡುವಮಂಡ ಕೆ.ಜೀವನ್ ಮರು ಆಯ್ಕೆಯಾದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯ ಮಹಿಳಾ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆೆಯಲ್ಲಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷ ಬೀಕಚಂಡ ಪುಟ್ಟು ಬೆಳ್ಯಪ್ಪ, ಸಂಘವು ಚಾಲಕರ ಮತ್ತು ಮಾಲೀಕರ ಹಿತ ಕಾಪಾಡಿಕೊಂಡು, ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಜಿಲ್ಲಾ ಪರವಾನಗಿಗಾಗಿ ಸಂಘವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಶಾಸಕರು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದೆ. ಸಂಘದ ಬಲವರ್ಧನೆಗಾಗಿ ಸರ್ವ ಸದಸ್ಯರು ಒಂದಾಗಿರಬೇಕು. ಸಂಘದಲ್ಲಿ ಪ್ರಸ್ತುತ ಮಹಿಳಾ ಸದಸ್ಯರು ಸೇರಿ ಒಟ್ಟು 81 ಸದಸ್ಯರಿದ್ದಾರೆ. ಮಹಾಸಭೆಯಲ್ಲಿ ಸುಮಾರು 10 ಜನರು ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ ಎಂದರಲ್ಲದೆ, ಒಂದು ವರ್ಷದ ಅವಧಿಯಲ್ಲಿ ಸಹಕಾರ ನೀಡಿದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ನೂತನ ಪದಾಧಿಕಾರಿಗಳು: ಬಳಿಕ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ಸಂಘ ಅಧ್ಯಕ್ಷರಾಗಿ ಶಿವದಾಸ್(ಶಿವು) ಉಪಾಧ್ಯಕ್ಷರಾಗಿ ಹ್ಯಾರಿಸ್, ಜಗದೀಶ್, ಪ್ರಧಾನ ಕಾರ್ಯದರ್ಶಿ-ಬಡುವಮಂಡ ಕೆ.ಜೀವನ್, ಸಹ ಕಾರ್ಯದರ್ಶಿ-ಕೋಮಲಾಪ್ರಿಯ, ಸಂಘಟನಾ ಕಾರ್ಯದರ್ಶಿ-ಜಗತ್‌ಕುಮರ್, ಕೋಶಾಧಿಕಾರಿ-ಬೀಕಚಂಡ ಪುಟ್ಟು ಬೆಳ್ಯಪ್ಪ, ಗೌರವ ಅಧ್ಯಕ್ಷರಾಗಿ ತೋರೆರ ಪ್ರಭುಕುಟ್ಟಪ್ಪ, ಎ.ವಿನೂಪ್, ಸಂಘದ ಕಾನೂನು ಸಲಹೆಗಾರರಾಗಿ ವಕೀಲ ಬಿ.ಎಸ್.ಪುಷ್ಪರಾಜ್ ಗೌರವ ಸಲಹೆಗಾರರಾಗಿ ಪ್ರವೀಣ್ ಶೇಟ್, ನಿರ್ದೇಶಕರಾಗಿ ಜನಾರ್ದನ್, ಶುಭಕರ್, ಜಿನ್ನಪ್ಪ, ಅಶೋಕ್, ಯಶ್ವಿನಿ, ಜೇಕಬ್ ನರೋನ, ರೇಗನ್, ಪ್ರಶಾಂತ್ ಮತ್ತು ಅರ್ಜುನ್ ತಿಮ್ಮಯ್ಯ ಆಯ್ಕೆಯಾದರು.
ಸರ್ವ ಸದಸ್ಯರು ಮಹಾಸಭೆಯಲ್ಲಿ ಹಾಜರಿದ್ದರು.