ರ್ಯಾಪಿಡೋ ಆಟೋ, ಬೈಕ್ ನಿಷೇಧಿಸಿ: ಆಟೋ ಚಾಲಕ-ಮಾಲೀಕರ ಸಂಘ ಒತ್ತಾಯ

Auto Drivers and Owners Association meeting Mandya
Published on

ಮಂಡ್ಯ: ರ‌್ಯಾಪಿಡೋ ಆಟೋ, ಬೈಕ್ ಮತ್ತು ಟ್ಯಾಕ್ಸಿ ನಿಷೇಧಿಸುವಂತೆ ಹೋರಾಟ ರೂಪಿಸುವ ನಿಟ್ಟಿನಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆನಡುವೆ ಆಟೋ ಚಾಲಕರು ಜೀವನ ಮಾಡುವುದು ಕಷ್ಟಕರವಾಗುತ್ತಿದೆ. ಈ ನಡುವೆ ಸ್ವ ಉದ್ಯೋಗದ ಮೇಲೆ ಬರೆ ಎಳೆಯುವ ನಿಟ್ಟಿನಲ್ಲಿ ರ‌್ಯಾಪಿಡೋ, ಉಬರ್‌ನಂಥಹ ಅಗ್ರಿಗೇಟರ್‌ಗಗಳಿಂದ ಪ್ರಯಾಣಿಕ ವಾಹನ ತರುತ್ತಿರುವುದು ದುರಂತ. ನಗರ, ಪಟ್ಟಣ ಪ್ರದೇಶಗಳಲ್ಲಿ ಆಟೋ, ಟ್ಯಾಕ್ಸಿ ಓಡಿಸಿಕೊಂಡು ಪ್ರಯಾಣಿಕರ ಸಹಯೋಗದಲ್ಲಿ ಸರಳ ಜೀವನ ನಡೆಸುತ್ತಿರುವ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗುತ್ತಿದೆ. ಇಂತಹ ನಿರ್ಧಾರ ವಿರೋಧಿಸುವುದು ಅನಿವಾರ್ಯ ಎಂದು ಹೇಳಿದರು.

ಮಂಡ್ಯ ನಗರದಲ್ಲಿ ರ‌್ಯಾಪಿಟೋ ಆಟೋ, ಬೈಕ್ ಬಳಕೆಗೆ ಮುಂದಾಗಿರುವ ವಿರುದ್ದ ಧ್ವನಿ ಎತ್ತಬೇಕು. ಇದರಿಂದ ಆಟೋ ಚಾಲಕರಿಗೆ ತುಂಬ ತೊಂದರೆಯಾಗುತ್ತದೆ. ಆಟೋ ಚಾಲಕರೇನು ಶ್ರೀಮಂತರಲ್ಲ. ದಿನಗೂಲಿ ನೌಕರರಿಗಿಂತಲೂ ಕಡಿಮೆ ಸಂಪಾದನೆಯಲ್ಲಿದ್ದಾರೆ. ಇವರಿಗೆ ಮೂಲ ಸೌಲಭ್ಯಗಳೇ ಕಾಣದಾಗಿವೆ. ಇಂತಹರ ಪರ ನಿಲ್ಲುವುದು ಸರ್ಕಾರದ ಹೊಣೆಯಾಗಿದೆ. ಆಟೋ ಚಾಲಕರಿಗೆ ಎಲ್ಲ ಸೌಲಭ್ಯ ಸಿಗಬೇಕು. ಪ್ರಯಾಣಿಕರ ಸೇವೆ ಮತ್ತು ಜೀವ ರಕ್ಷಿಸುವ ಇವರಿಗೆ ಸಾಕಷ್ಟು ಸಮಸ್ಯೆಗಳು ಇವೆ ಎಂದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ಟಿ.ಕೃಷ್ಣ, ವಿವಿಧ ಸಂಘಟನೆಗಳ ಎಚ್.ಡಿ.ಜಯರಾಂ, ನರಸಿಂಹಮೂರ್ತಿ, ಎಂ.ಬಿ.ನಾಗಣ್ಣಗೌಡ, ಪ್ರೊ.ಮಹದೇವು, ಮುದ್ದೇಗೌಡ, ವೆಂಕಟರಮಣ, ಗುರುಶಂಕರ್, ಜಯಶಂಕರ್, ರಮೇಶ್‌ಬಾಬು, ಸತ್ಯಪ್ಪ, ರವಿ, ನಾರಾಯಣ್, ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net