

ಚಿಕ್ಕಬಳ್ಳಾಪುರ: ಹುಚ್ಚು ಶೋಕಿಯಲ್ಲಿ ದುವರ್ತನೆ ತೋರುವಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಇದರ ನಡುವೆ ಲಾಂಗ್ ಹಿಡಿದು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದ ಆಟೋ ಚಾಲಕನಿಗೆ ಪೊಲೀಸರು ಪಾಠ ಕಲಿಸಿದ್ದಾರೆ.
ಗೌರಿಬಿದನೂರು ತಾಲೂಕಿನ ವೈಚಕೂರಿನಲ್ಲಿ ಆಟೋ ಚಾಲಕ ಅನಿಲ್ ಕುಮಾರ್ ಬಿಲ್ಡಪ್ ಕೊಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾನೆ. ಶೋಕಿಯು ಆತನಿಗೆ ತಲೆ ನೋವು ತಂದಿದೆ.
*ಪ್ರಕರಣದ ಹಿನ್ನೆಲೆ
ಆಟೋ ಚಾಲಕ ಅನಿಲ್ ಕುಮಾರ್ ಹುಟ್ಟು ಹಬ್ಬವನ್ನು ಬಳಗದೊಂದಿಗೆ ತಡರಾತ್ರಿ ಆಚರಿಸಿಕೊಂಡಿದ್ದಾನೆ. ಕೇವಲ ಇಷ್ಟು ಮಾಡಿದ್ದರೆ ಏನು ಆಗುತ್ತಿರಲಿಲ್ಲ. ಲಾಂಗ್ ಹಿಡಿದು ಸಾಲು ಸಾಲು ಕೇಕ್ ಗಳನ್ನು ಕತ್ತರಿಸಿದ್ದಾನೆ. ಅದು ಬೇರೆ ಕಿಂಗ್ ಅಂತಾ ಅಕ್ಷರಗಳ ಕೇಕ್. ಗಾಡಿ ಮೇಲೊಂದು, ಮತ್ತೊಂದು ಕಡೆ ಇನ್ನೊಂದು ಕೇಕ್ ಅನ್ನು ಕತ್ತರಿಸಿ ಪೋಸ್ ಕೊಟ್ಟಿದ್ದಾನೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಈತನಿಗೆ ಪಾಠ ಕಲಿಸಿದ್ದಾರೆ.
*ಮುಚ್ಚಳಿಕೆ ಬರೆದುಕೊಟ್ಟ ಆರೋಪಿ
ಠಾಣೆಗೆ ಕರೆದುಕೊಂಡ ಬಂದ ಪೊಲೀಸರು ಈತನಿಗೆ ಪಾಠ ಮಾಡಿದ್ದಾರೆ. ಲಾಂಗ್ ಹಿಡಿದು ಕೇಕ್ ಕತ್ತರಿಸುವ ಅವಶ್ಯಕತೆ ಏನ್ ಇತ್ತು? ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಆರೋಪಿ ಮುಚ್ಚಳಿಕೆ ಬರೆದುಕೊಟ್ಟು ಇನ್ನೇಂದು ಹೀಗೆ ವರ್ತಿಸುವುದಿಲ್ಲ ಎಂದು ಹೇಳಿದ್ದಾನೆ.
*ಶೋಕಿ ನೆಪದಲ್ಲಿ ವಿಡಿಯೋ
ಇತ್ತೀಚೆಗೆ ರೀಲ್ಸ್ ವಿಡಿಯೋಗಳ ಶೋಕಿ ನೆಪದಲ್ಲಿ ದುವರ್ತನೆ ತೋರುವಂತಹ ಪ್ರವೃತ್ತಿ ಹೆಚ್ಚಾಗುತ್ತಿದೆ. ಸಿನಿಮಾಗಳಲ್ಲಿನ ಮಾದರಿಯಲ್ಲಿ ಲಾಂಗ್ ಹಿಡಿಯುವುದು, ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವುದು, ರೌಡಿಶೀಟರ್ ಗಳಂತೆ ಕಾಣಿಸುವುದು ಸೇರಿದಂತೆ ಅನಪೇಕ್ಷಿತ ರೀತಿಯಲ್ಲಿ ಕಾಣಿಸಿಕೊಳ್ಳಲಾಗುತ್ತದೆ. ಹೀಗೆ ಮಾಡದಂತೆ ಪೊಲೀಸರು ಸೂಚಿಸುತ್ತಿದ್ದರೂ ಹಾವಳಿ ನಿಲ್ಲುತ್ತಿಲ್ಲ. ಇದಕ್ಕೆ ನಿಯಾಮಾನುಸಾರ ಪಾಠ ಕಲಿಸಲು ಮುಂದಾಗಿದ್ದಾರೆ.