ರಸ್ತೆಯಲ್ಲೇ ವಿಷ ಸೇವಿಸಿದ ಆಟೋ ಚಾಲಕ

rickshow new
Published on

ಕಾರ್ಕಳ: ನಗರದ ಮಂಜುನಾಥ ಪೈ ಸಭಾಂಗಣ ಬಳಿಯ ದೇವರಗದ್ದೆ ರಸ್ತೆಯಲ್ಲಿ ಶನಿವಾರ ಚಾಲಕನೊಬ್ಬ ಆಟೋರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕ್ಕಮಗಳೂರು ಮೂಲದ ಪ್ರಸ್ತುತ ಬಂಗ್ಲೆಗುಡ್ಡೆಯ ಸದ್ಭಾವನಾ ನಗರದಲ್ಲಿ ವಾಸಿಸುತ್ತಿರುವ ಮಂಜುನಾಥ (34) ಎಂಬುವರು ವಿಷ ಸೇವನೆಗೈದಿದ್ದು, ಗಂಭೀರ ಸ್ಥಿತಿಯಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಜುನಾಥ ಅವರನ್ನು ಸ್ಥಳೀಯ ನಾಗರಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net