ಶ್ರೀಮಂತರು ಉದಾರಿಗಳಾದರೆ ದೇಶಕ್ಕೆ ಬಡತನವಿಲ್ಲ

web 4
Published on

ಕೊಪ್ಪ: ಶ್ರೀಮಂತರು ಉದಾರಿಗಳಾದರೆ ದೇಶಕ್ಕೆ ಬಡತನವಿಲ್ಲ ಎಂದು ಕೊಪ್ಪ ಅಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ಮುಖ್ಯ ಅಟೋ ನಿಲ್ದಾಣದಲ್ಲಿ ಆಟೋಚಾಲಕರ ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕರೊನಾದಿಂದ ಎಂಟು ತಿಂಗಳಿಂದ ಬಡವರು, ಕೂಲಿ ಕಾರ್ವಿುಕರು, ರೈತರು, ಅಸಂಘಟಿತ ವಲಯದ ಕಾರ್ವಿುಕರು ಅತ್ಯಂತ ಕಷ್ಟದ ದಿನಗಳನ್ನು ಅನುಭವಿಸುತ್ತಿದ್ದಾರೆ. ಉಳ್ಳವರು ಇಲ್ಲದವರ ನೆರವಾಗುವ ಮೂಲಕ ಬಡವರಿಗೆ ಸಹಕರಿಸಬೇಕು ಎಂದು ಹೇಳಿದರು.

ಸಂಘದ ಕ್ಷೇತ್ರಾಧ್ಯಕ್ಷ ಎಚ್.ಆರ್.ಜಗದೀಶ್ ಮಾತನಾಡಿ, ಕೊಪ್ಪ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದರಿಯಾಗಿದೆ. ಆಟೋ ಚಾಲಕರಿಗೆ ಬಿಪಿಎಲ್ ಕಾರ್ಡ್, ಆಟೋ ನಿಲ್ದಾಣಗಳಿಗೆ ಮೇಲ್ಛಾವಣಿ ಮಾಡಿಸುವಲ್ಲಿ ನಮ್ಮ ಸಂಘದ ಹೋರಾಟ ಪ್ರಮುಖವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net