ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಆಟೋ ಚಾಲಕ

Auto Driver
Published on

ತುಮಕೂರು: ಮಳೆ ನೀರಿನಲ್ಲಿ ಆಟೋಚಾಲಕನೊಬ್ಬ ಕೊಚ್ಚಿಕೊಂಡು ಹೋದಂಥ ಪ್ರಕರಣವೊಂದು ನಡೆದಿದ್ದು, ಆಟೋ ಪತ್ತೆಯಾಗಿದೆ. ಚಾಲಕನಿಗಾಗಿ ಹುಡುಕಾಟ ಮುಂದುವರಿದಿದೆ. ತುಮಕೂರು ಜಿಲ್ಲೆಯಲ್ಲಿ ಈ ಅವಘಡ ಉಂಟಾಗಿದೆ.

ತುಮಕೂರು ನಗರದ ರಿಂಗ್ ರಸ್ತೆಯ ಧಾನ್ಹಾ ಪ್ಯಾಲೇಸ್ ಸಮೀಪ ಇಂದು ಈ ಘಟನೆ ನಡೆದಿದೆ. ಮರಳೂರು ದಿಣ್ಣೆ ನಿವಾಸಿ, ಆಟೋಚಾಲಕ ಅಮ್ಜದ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ. ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಆಟೋದಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

ರಿಂಗ್‌ ರಸ್ತೆಯ ಧಾನ್ಹಾ ಪ್ಯಾಲೇಸ್‌ ಕಡೆಯಿಂದ ಗುಬ್ಬಿಗೇಟ್‌ ಕಡೆ ಅಮ್ಜದ್​ ಸಾಗುತ್ತಿದ್ದು, ಈತನ ಆಟೋ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ಬಂದು ಶೋಧ ಕಾರ್ಯಾಚರಣೆ ನಡೆಸಿದೆ. ಅದಾಗ್ಯೂ ಅಮ್ಜದ್ ಪತ್ತೆ ಆಗಿಲ್ಲ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net