ಲಾರಿಗೆ ಸಿಲುಕಿ ಆಟೋ ನುಜ್ಜುಗುಜ್ಜು

Untitled-1
ಲಾರಿ ಚಕ್ರಕ್ಕೆ ಸಿಲುಕಿ ನುಜ್ಜುಗುಜ್ಜಾಗಿರುವ ಆಟೋ.
Published on

ಆನೇಕಲ್​: ಪಟ್ಟಣದ ಹೊಸೂರು ಮುಖ್ಯ ರಸ್ತೆಯಲ್ಲಿ ಮಂಗಳವಾರ ಸಿಮೆಂಟ್​ ಮಿಕ್ಸರ್​ ಲಾರಿ ಚಕ್ರದ ಹಿಂಬದಿಗೆ ಪ್ರಯಾಣಿಕರಿದ್ದ ಆಟೋವೊಂದು ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಮತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹೊಸೂರು ಮಾರ್ಗವಾಗಿ ಆನೇಕಲ್​ಗೆ ಬರುತ್ತಿದ್ದ ಸಿಮೆಂಟ್​ ಮಿಕ್ಸರ್​ ಲಾರಿ ಹಾಗೂ ಆಟೋ ನಡುವೆ ಡಿಕ್ಕಿಯಾಗಿದೆ. ಈ ವೇಳೆ ಹಿಂಬದಿಯ ಎಡ ಭಾಗದ ಚಕ್ರಕ್ಕೆ ಆಟೋ ಸಿಲುಕಿ ಸಂಪೂರ್ಣ ಜಜ್ಜಿದೆ. ಆಟೋ ಮುಂಭಾಗ ತುಂಡಾಗಿ ಬೇರ್ಪಟ್ಟಿದೆ. ತಕ್ಷಣ ಚಾಲಕ ಆಟೋದಿಂದ ಕೆಳಗೆ ಇಳಿದು ಪ್ರಯಾಣಿಕರನ್ನು ಪಾರು ಮಾಡಿದ್ದಾನೆ. ಆನೇಕಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net