ಅಪಘಾತದಲ್ಲಿ ಚಾಲಕ ಗಂಭೀರ, ಮಹಿಳೆ ಗಾಯ

PTR_29 JUNE_2
Published on

ಪುತ್ತೂರು: ಮಾಣಿ - ಮೈಸೂರು ಹೆದ್ದಾರಿಯ ಪುತ್ತೂರು ಬೈಪಾಸ್ ನ ತೆಂಕಿಲದಲ್ಲಿ ರಿಕ್ಷಾ ಹಾಗೂ ಕ್ರೇನ್ ನಡುವೆ ಅಪಘಾತವಾಗಿದ್ದು, ರಿಕ್ಷಾ ಚಾಲಕ ಗಂಭೀರ ಗಾಯವಾಗಿ, ರಿಕ್ಷಾದಲ್ಲಿ ಮಹಿಳೆ ಗಾಯವಾಗಿದೆ.

ದರ್ಭೆ ಕಡೆಯಿಂದ ಮಂಜಳಪಡ್ಪು ಕಡೆಗೆ ಸಂಚರಿಸುತ್ತಿದ್ದ ರಿಕ್ಷಾಕ್ಕೆ ಹಿಂದಿನಿಂದ ಕ್ರೇನ್ ಡಿಕ್ಕಿಯಾಗಿದ್ದು, ರಿಕ್ಷಾ ರಸ್ತೆಗೆ ಮಗುಚಿ ಬಿದ್ದಿದೆ. ರಿಕ್ಷಾ ಹಿಂಭಾಗಕ್ಕೆ ಸಂಪೂರ್ಣ ಜಖಂಗೊಂಡಿದ್ದು, ಗಂಭೀರ ಗಾಯಗೊಂಡ ರಿಕ್ಷಾ ಚಾಲಕನನ್ನು ಪುತ್ತೂರು ಖಾಸಗೀ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾಯಿಸಲಾಗಿದೆ. ಮಹಿಳೆಯನ್ನು ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಬೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net