

ಮಡಿಕೇರಿ:
ಐತಿಹಾಸಿಕ ಮಡಿಕೇರಿ ದಸರಾ ಶೋಭಾಯಾತ್ರೆಯಲ್ಲಿ ಈ ಬಾರಿ ಅಬ್ಬರದ ಧ್ವನಿ ವರ್ಧಕಗಳ ಬಳಕೆಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಲು ಶನಿವಾರ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನ…ತೆಗೆದುಕೊಳ್ಳಲಾಗಿದೆ.…ಕೋಟೆ ಮಾರಿಯಮ್ಮ ದೇವಾಲಯ ಸಭಾಂಗಣದಲ್ಲಿ ದಶಮಂಟಪ ಸಮಿತಿ ಅಧ್ಯಕ್ಷ ಜಿ.ಕೆ. ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ದಶಮಂಟಪ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಮಾತನಾಡಿದ ಜಗದೀಶ್, ಕಳೆದ ವರ್ಷ ದಸರಾ ಶೋಭಾ ಯಾತ್ರೆ ವೇಳೆ ಡಿಜೆ ಬಳಸಿದ ಕಾರಣ ದಶಮಂಟಪಗಳು ಕಾನೂನು ಕ್ರಮ ಎದುರಿಸುವಂತಾಗಿತ್ತು. ಈ ಬಾರಿ ಇಂಥ ಕ್ರಮಗಳಿಗೆ ಅವಕಾಶ ಕೊಡಬಾರದು. ಡಿಜೆಯಲ್ಲಿ ಕೇವಲ 12 ಬಾಕ್ಸ್ ಮಾತ್ರ ಎಲ್ಲಾ ಮಂಟಪಗಳು ಬಳಸಬೇಕು. ಮಂಟಪಗಳಲ್ಲಿ ಲೇಸರ್ ಲೈಟ್, ಸುಡುಮದ್ದುಗಳನ್ನು ನಿಷೇಧಿಸಿದ್ದು, ಇದಕ್ಕೆ ದಶಮಂಟಪಗಳು ಬದ್ಧವಾಗಿರಬೇಕು. ಇದಕ್ಕೆ ಸಂಬAಧಿಸಿದAತೆ ದಶಮಂಟಪಗಳು ಒಪ್ಪಿ ನಿರ್ಣಯ ಕೈಗೊಳ್ಳಬೇಕು. ದಸರಾ ಆಚರಣೆಯಲ್ಲಿ ಇತಿಹಾಸದ ಸಂಪ್ರದಾಯ ಮುಂದುವರಿಯಬೇಕು. ದಸರಾಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಆಚರಣೆ ನಡೆಸಬೇಕು ಎಂದರು.
ಇದೇ ವೇಳೆ ಮಾತನಾಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಈ ಬಾರಿಯೂ ರಾಜ್ಯ ಸರ್ಕಾರದಿಂದ ಮಡಿಕೇರಿ ದಸರಾಕ್ಕೆ ಅನುದಾನ ಸಿಗಲಿದೆ. ಸೋಮವಾರ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಇದರಲ್ಲಿ ಶಕ್ತಿದೇವತೆಗಳ ಕರಗ ಮತ್ತು ದಶಮಂಟಪಗಳಿಗೂ ಅನುದಾನ ಸಿಗಲಿದೆ. ಹಾಗಾಗಿ ಅನುದಾನದ ವಿಷಯದಲ್ಲಿ ದಶಮಂಟಪ ಸಮಿತಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ನಗರದಲ್ಲಿ ಮಂಟಪಗಳು ಶೋಭಾ ಯಾತ್ರೆ ತೆರಳುವಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಇಲ್ಲಿ ಮಂಟಪಗಳು ಹೋಗದ ಸ್ಥಿತಿ ಇದೆ ಎಂದು ಕೆಲವು ಸದಸ್ಯರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದಶಮಂಟಪ ಸಮಿತಿ ಪದಾಧಿಕಾರಿಗಳು ಈಗಾಗಲೇ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ದಸರಾ ವೇಳೆಗೆ ಎಲ್ಲಾ ರಸ್ತೆಗಳು ಸರಿಯಾಗಲಿವೆ ಎಂದರು.
ಪ್ರಮುಖರಾದ ಯೋಗೇಶ್, ಸದಾ ಮುದ್ದಪ್ಪ, ಮಂಜುನಾಥ್, ರಾಜೇಶ್, ರಂಜಿತ್, ಪ್ರಭುರೈ ಮತ್ತಿತರರು ಇದ್ದರು.