ವಿದ್ಯುತ್ ಕಂಬಕ್ಕೆ ಆಟೋ ಡಿಕ್ಕಿ

bhr ato
ಬಾಳೆಹೊನ್ನೂರಿನ ಕೊಪ್ಪ-ಶೃಂಗೇರಿ ರಸ್ತೆಯಲ್ಲಿ ಆಟೋ ರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿರುವುದು.
Published on

ಬಾಳೆಹೊನ್ನೂರು: ಮುಖ್ಯರಸ್ತೆಯಲ್ಲಿ ಡಿಕ್ಕಿಯಾಗಿದ್ದ ಬೈಕ್, ಆಟೋವನ್ನು ತಪ್ಪಿಸಲು ಹೋದ ಮತ್ತೊಂದು ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಪಟ್ಟಣದ ಹೊರವಲಯದ ಕೊಪ್ಪ-ಶೃಂಗೇರಿ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಬೈಕ್ ಮತ್ತು ಆಟೋ ಡಿಕ್ಕಿಯಾಗಿದ್ದು, ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಆಟೋ ಚಾಲಕ ಕಣ್ಣೆದುರಿಗೆ ಆಗಿದ್ದ ಅಪಘಾತ ನೋಡಿ ಗಲಿಬಿಲಿಗೊಂಡು ಆಟೋವನ್ನು ರಸ್ತೆ ಬದಿಗೆ ತಿರುಗಿಸಿದ್ದಾನೆ. ಆಟೋ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೋ ಚಾಲಕ ಸುಲೈಮಾನ್ ಕಾಲಿನ ಮೂಳೆ ಮುರಿದಿದೆ. ಆಟೋದಲ್ಲಿ ಖಾಸಗಿ ಶಾಲೆಯ ಐವರು ವಿದ್ಯಾರ್ಥಿಗಳಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net