

ಮುದಗಲ್: ಆಶಿಹಾಳ ಗ್ರಾಮದ ಬಸವಣ್ಣ ದೇವರ ದೇವಸ್ಥಾನ ಬಳಿ ಶುಕ್ರವಾರ ಆಟೋ-ಕಾರು ನಡುವೆ ಡಿಕ್ಕಿಯಾಗಿ ನಾಲ್ವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಟೋ ಪಲ್ಟಿಯಾಗಿದ್ದರಿಂದ ಅಂಕನಾಳದ ಬಸಮ್ಮ ಜುಮ್ಮನಗೌಡ (50), ಕಮಲದಿನ್ನಿಯ ದ್ಯಾಮಮ್ಮ (45), ಹುಲಿಹೈದರ್‌ನ ಕನಕಮ್ಮ ದುರಗಪ್ಪ (35), ಆಮದಿಹಾಳ ಸಂಗಮ್ಮ ದುರುಗಪ್ಪ (65) ಗಾಯಾಳುಗಳು. ಬಸಮ್ಮ ಕಾಲಿಗೆ, ದ್ಯಾವಮ್ಮ ಅವರ ಕೈಗೆ ತೀವ್ರ ಗಾಯಗಳಾಗಿದ್ದರಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಉಳಿದ ಇಬ್ಬರನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಮುದಗಲ್‌ನಿಂದ ನಾಗರಹಾಳ ಕಡೆಗೆ ಹೊರಟಿದ್ದ ಆಟೋ ಹಾಗೂ ನಾಗರಹಾಳದಿಂದ ಮುದಗಲ್ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಅಪಘಾತವಾಗಿದೆ. ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.