ಮುಂಗುಸಿಯನ್ನು ಬದುಕಿಸಲು ಹೋದ ರಿಕ್ಷಾ ಅಪಘಾತ

IMG-20230813-WA0015
Published on

ವಿಟ್ಲ: ಸಾಲೆತ್ತೂರು - ವಿಟ್ಲ ರಸ್ತೆಯ ಕೊಡುಂಗಾಯಿಯಲ್ಲಿ ಚಲಿಸುತ್ತಿದ್ದ ಅಟೋ ರಿಕ್ಷಾಕ್ಕೆ ಅಡ್ಡ ಬಂದ ಮುಂಗುಸಿಯನ್ನು ರಕ್ಷಿಸಲು ಹೋಗಿ ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಲಪದವು ನಿವಾಸಿ ಆಟೋ ಚಾಲಕ ಇಸ್ಮಾಯಿಲ್ (53) ಗಾಯಗೊಂಡಿದ್ದಾರೆ. ಸಾಲೆತ್ತೂರು ಕಡೆಗೆ ಪ್ರಯಾಣಿಕರನ್ನು ಬಿಟ್ಟು ಹಿಂತಿರುಗುತ್ತಿದ್ದಾಗ ಕೊಡಂಗಾಯಿ ಸೇತುವೆ ಬದಿಯಲ್ಲಿ ಮುಂಗುಸಿ ಅಡ್ಡಬಂದಿದೆ. ಅದರ ಪ್ರಾಣ  ರಕ್ಷಣೆಗಾಗಿ ಚಾಲಕ ಏಕಾಏಕಿ ರಿಕ್ಷಾ ನಿಲ್ಲಿಸಲು ಮುಂದಾಗಿದ್ದು, ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಬಲವಾಗಿ ಅಪ್ಪಳಿಸಿ ಜಖಂಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net